ಶಿವಮೊಗ್ಗ: ಮೀಸಲಾತಿ ವಿವಾದದಿಂದ ನಡಯಬೇಕಿದ್ದ ಸಾಗರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಹಾಲಿ ವಿದಾದಕ್ಕೆ ತೆರೆ ಬಿದ್ದು ಫೆಬ್ರವರಿ 25ರಂದು ಅದಿಕೃತ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಅಧಿಕಾರ ಗದ್ದುಗೆಗೆ ಏರಲು ಕಾಂಗ್ರೆಸ್ ಪಕ್ಷದಿಂದ ಆಪರೇಷನ್ ಹಸ್ತ ಆರಂಭಿಸಲು ತೆರೆ ಮರೆಯಲ್ಲಿ ಕಸರತ್ತು ಶುರುವಾಗಿ ಎನ್ನಲಾಗುತ್ತಿದೆ.
ಸಾಗರ ನಗರಸಭೆಯಲ್ಲಿ ಹಾಲಿ ಬಿಜೆಪಿ 16 ಸದಸ್ಯರ ಮೂಲಕ ಬಹುಮತ ಹೊಂದಿದೆ. ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದ್ದರೆ ಪಕ್ಷೇತರರು 5 ಜನರಿದ್ದಾರೆ. ಕಾಂಗ್ರೇಸ್, ಪಕ್ಷೇತರರು ಒಟ್ಟಾಗಿ ಶಾಸಕ ಜಿಕೆಬಿ ಮತ ಚಲಾವಣೆ ಮಾಡಿದರೂ ಸದಸ್ಯರ ಸಂಖ್ಯೆ 15 ಆಗುತ್ತದೆ.
ಸಂಸದ ಬಿ.ವೈ.ವಿಜಯೇಂದ್ರ ಬಿಡುವು ಮಾಡಿಕೊಂಡು ಬಂದು ಮತ ಚಲಾವಣೆ ಮಾಡಿದರೆ ಬಿಜೆಪಿಯ ಸಂಖ್ಯೆ 17 ಆಗುತ್ತದೆ. ಯಾವುದೇ ರೀತಿಯಲ್ಲಿ ಲೆಕ್ಕ ಹಾಕಿದರೂ ಬಿಜೆಪಿ ಕೈಯಲ್ಲಿ ಅಧಿಕಾರ ಉಳಿಯುತ್ತದೆ ಎನ್ನುವುದು ಸಾಮಾನ್ಯ ಲೆಕ್ಕಾಚಾರ. ಆದರೆ ಹಾಲಿ ನಗರಸಭೆ ಆವರಣದಲ್ಲಿ ನಡೆಯುತ್ತಿರುವ ಚರ್ಚೆ ನೋಡಿದರೆ ಶಾಸಕ ಗೋಪಾಲಕೃಷ್ಣ ಬೇಳೂರು ನೇತ್ರತ್ವದಲ್ಲಿ ಆಪರೇಸಷನ್ ಹಸ್ತದ ಚಟುವಟಿಕೆ ಬಿರುಸಾಗಿ ನಡೆದಿದೆ ಎನ್ನಲಾಗಿದೆ. ಜಿಕೆಬಿ ಫೀಲ್ಡ್‌ಗೆ ಇಳಿದಿದ್ದಾರೆ ಎಂದರೆ ಏನಾದರೂ ಒಂದು ಚಮತ್ಕಾರ ಮಾಡೇ ತೀರುವುದು ಅವರ ಜಾಯಮಾನ.
ಇಂತಹ ಚಮತ್ಕಾರವನ್ನು ಇತ್ತೀಚೆಗಷ್ಟೆ ಕಾರ್ಗಲ್-ಜೋಗ್ ಮತ್ತು ಹೊಸನಗರ ಪಟ್ಟಣ ಪಂಚಾಯಿತಿಯ ಚುನಾವಣೆಯಲ್ಲಿ ಮಾಡಿ ತೋರಿಸಿದ್ದಾರೆ. ಇದೇ ಚಮತ್ಕಾರವನ್ನು ಸಾಗರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಮಾಡಲು ದಾಳ ಉರಳಿಸಿದ್ದಾರೆ ಎನ್ನಲಾಗಿದೆ. ಕಾರಣ ಕಾರ್ಗಲ್ ಜೋಗ್ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಇದ್ದದ್ದು ಒಂದೇ ಒಂದು ಸೀಟಿನ ಬಲ. ಆದರೆ ಜಿಕೆಬಿಯವರ ಮ್ಯಾಜಿಕ್‌ನಿಂದಾಗಿ ಇಲ್ಲಿನ ಅಧಿಕಾರ ಕೈವಶವಾಗಿದೆ.
ಇನ್ನು ಹೊಸನಗರ ಪಂಚಾಯಿತಿಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ಇಲ್ಲಿಯ ಅಧಿಕಾರ ಕೈ ತೆಕ್ಕೆಗೆ ಪಡೆಯಲು ಜಿಕೆಬಿ ಯಶಸ್ವಿಯಾದರು. ಈ ಎರಡು ಪಂಚಾಯಿತಿಯ ಅಧಿಕಾರ ಹಿಡಿಯುವಲ್ಲಿ ಜಿಕೆಬಿ ಮಾಡಿದ ಮ್ಯಾಜಿಕ್ ಹಿನ್ನಲೆಯಲ್ಲಿ ವಿಶ್ಲೇಷಣೆ ಮಾಡಿದರೆ ಸಾಗರ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿ ಆದರೂ ಆಗಬಹುದು.
ಸಾಗರ ನಗರಸಭೆ ಆಡಳಿತ ಚುಕ್ಕಾಣಿಗಾಗಿ ಆಪರೇಆನ್ ಹಸ್ತ ಹೇಗೆ?
ಸಾಗರ ನಗರಸಭೆಯಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ಕೆಲವು ಸದಸ್ಯರಿಗೆ ನಗರ ನಾಯಕರ ಮೇಲೆ ಅಸಮಾಧಾನವಿದೆ. ಎಲ್ಲಾ ತಿರ್ಮಾನವು ನಗರದ ಇಬ್ಬರೂ ನಾಯಕರು ಮಾಡುತ್ತಾರೆ ಎನ್ನುವುದು ಬಹಳ ಮುಖ್ಯ ಕಾರಣ. ನಗರ ಘಟಕದ ಆದಕ್ಷರಾದ ಗಣೇಶ್ ಪ್ರಸಾದ್ ಅವರು ತಮ್ಮ ಅಧ್ಯಕ್ಷ ಅವದಿ ಮುಗಿದರು, ಮತ್ತೆ ಅವರೇ ಮುಂದುವರೆದಿದ್ದಾರೆ.
ಇವರ ಹಿಂದೆ ಟಿ.ಡಿ.ಮೇಘರಾಜ್ ಇದ್ದಾರೆ ಎನ್ನುವುದು. ಮತ್ತು ಪಕ್ಷದ ಹಲವಾರು ಆಂತರಿಕ ಚಟುವಟಿಕೆಯನ್ನು ಇವರಿಬ್ಬರೆ ನಿಯಂತ್ರಿಸುತ್ತಾರೆ ಎನ್ನುವುದು ಬಿಜೆಪಿ ನಗರಸಭೆ ಕೆಲವು ಸದಸ್ಯರಿಗೆ ಇರುವ ಅಸಮಧಾನ. ಈ ಅಸಮಾಧಾನವನ್ನೆ ಬಳಸಿಕೊಳ್ಳಲು ಜಿಕೆಬಿ ನೇತ್ರತ್ವದ ಕಾಂಗ್ರೆಸ್ ಮಾಡಲು ಹೊರಟಿದೆ ಎನ್ನಲಾಗಿದೆ.
ಲೆಕ್ಕಾಚಾರ ಹೇಗೆ?
ಕಾಂಗ್ರೆಸ್ ಮತ್ತು ಪಕ್ಷೇತರರು ಒಂದಾದರೂ ಸಂಖ್ಯೆ ೧೫ ದಾಟುವುದಿಲ್ಲ. ಪಕ್ಷೇತರ ಅಭ್ಯರ್ಥಿ ತುಕಾರಾಂ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವಲ್ಲಿ ಸುತಾರಾಂ ಒಪ್ಪುವುದಿಲ್ಲ. ಇನ್ನು ಕುಸುಮ ಸುಬ್ಬಣ್ಣ,ನಾದೀರ ಮತ್ತು ಉಷಾ ಗುರುಮೂರ್ತಿಯರ ಅವರ ನಡೆ ಹೇಗೆ ಇರುತ್ತದೆ ಎನ್ನುವುದು ನಿಗೂಡವಾಗಿದೆ. ಒಂದು ಮೂಲದ ಪ್ರಕಾರ ಈ ಮೂವರು ಕಾಂಗ್ರೆಸ್‌ಗೆ ಬೆಂಬಲ ಕೊಡಲು ಒಪ್ಪಿದ್ದರೂ ಎನ್ನಲಾಗಿದೆ.
ಇನ್ನು ಪಕ್ಷೇತರ ಅಭ್ಯರ್ಥಿ ಸತೀಶ್ ನಡೆ ಏನು ಎನ್ನುವುದು ಬಹಳ ಕೂತೂಹಲಕಾರಿಯಗಿದೆ. ಅಸಮಾಧನಗೊಂಡ ಬಿಜೆಪಿಯ ಕೆಲವು ಸದಸ್ಯರು ಚುನಾವಣೆಗೆ ಗೈರು ಆಗುತ್ತಾರೆ ಎನ್ನುವ ಸೂಚನೆ ಸಿಗುತ್ತಿದ್ದಂತೆ ಸಂಸದ ಬಿವೈಆರ್ ಆಡಳಿತ ತಮ್ಮ ಕೈ ತಪ್ಪುತ್ತದೆ ಎಂದು ಇವರು ಕೂಡ ಹಲವು ರೀತಿಯ ದಾಳ ಹಾಕುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಶಾಸಕ ಹಾಲಪ್ಪ ಮತ್ತು ಸಂಸದರು ಬಿಜೆಪಿ ಸದಸ್ಯರನ್ನು ಒಂದು ಕಡೆ ಸೇರಿಸಲು ಹರಸಾಹಸ ಮಾಡುತ್ತಿದಾರೆ ಎನ್ನುವುದು ಖಚಿತ ಮಾಹಿತಿ.
ಆಪರೇಷನ್ ಹಸ್ತ ಯಸ್ವಿಯಾಗಬೇಕಾದರೆ ಕಾಂಗ್ರೆಸ್ಸಿನ 9 ಸದಸ್ಯರು ಮತ್ತು ಜಾಕೀರ್ ಅವರು ಸೇರಿ ಸಂಖ್ಯೆ ಹತ್ತು ಆಗುತ್ತದೆ. ಈ ಹತ್ತರಿಂದ ಆಡಳಿತ ಗಾದಿಗೆ ಹತ್ತಬೇಕಾದರೆ 4 ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಬೇಕು. ಶಾಸಕ ಜಿಕೆಬಿಯ ಮತ ಸೇರಿ 15 ಆಗುತ್ತದೆ.
ಅತ್ತ ಬಿಜೆಪಿಯ ಮೂವರು ಸದಸ್ಯರು ಚುನಾವಣೆಗೆ ಗೈರು ಆಗಬೇಕು. ಆಗ ಸಂಸದರ ಮತ ಸೇರಿದರೂ 14 ಆಗುತ್ತದೆ. ಹೀಗಾದರೆ ಆಪರೇಷನ್ ಹಸ್ತ ಯಶಸ್ವಿಯಾಗುತ್ತದೆ. ಆದರೆ ಪಕ್ಷೇತರ ಅಭ್ಯರ್ಥಿ ಸತೀಶ್ ಯಾರ ಜಪ್ತಿಗೂ ಸಿಗದೆ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಪ್ರಾಯಶಃ ಇವರು ಯಾರ ಪರ ನಿಲುತ್ತಾರೆ ಎನ್ನುವುದು ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪರೇಷನ್ ಹಸ್ತದ ಭವಿಷ್ಯದಲ್ಲಿ ಅಡಗಿದೆ.
ವರದಿ: ಚಾರ್ವಾಕ ರಾಘವೇಂದ್ರ, ಹಿರಿಯ ಪತ್ರಕರ್ತರು, ಸಾಗರ
BIG NEWS: ಸಾರ್ವಜನಿಕರು ‘ಸರ್ಕಾರಿ ಕಚೇರಿ’ಗೆ ಭೇಟಿ ವೇಳೆ ಅಧಿಕಾರಿಗಳು ‘ಸಭೆ’ ನಡೆಸುವಂತಿಲ್ಲ: ರಾಜ್ಯ ಸರ್ಕಾರ ಆದೇಶ
Watch Video: ಹಮಾಸ್ ಸೈನಿಕನ ಹಣೆಗೆ ಮುತ್ತಿಟ್ಟ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು | Israel-Hamas war