ಚಿತ್ರದುರ್ಗ: ಹೊಸದುರ್ಗದಲ್ಲಿ ಕಾಡುಗೊಲ್ಲ ಜನಪದ ಸೊಗಡು ವತಿಯಿಂದ ನಮ್ಮ ನಡಿಗೆ ಗೊಲ್ಲರಹಟ್ಟಿ ಜನಪದ ಕಲೆ ಕಡೆಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ನಮ್ಮ ಕಾಡುಗೊಲ್ಲ ಜಾನಪದ ಅತ್ಯಂತ ಶ್ರೀಮಂತವಾದದ್ದು. ಕೋಲಾಟದ ಪದಗಳು,ಸೋಬಾನೆ ಪದಗಳು, ಗಗ್ರಿ ಪದಗಳು, ದೇವರ ಉತ್ಸವಗಳು,ಬುಡಕಟ್ಟು ವೀರರ ಕತೆಗಳು,ಗಣೆ ಪದ, ಮುಂತಾದ ವಿವಿಧ ಪ್ರಕಾರದ ಜಾನಪದ ಸಾಂಸ್ಕೃತಿಯನ್ನು ನಮ್ಮ ಸಮುದಾಯದಲ್ಲಿ
ಕಾಣಬಹುದು.
ಕಾಡುಗೊಲ್ಲರ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಅತ್ಯಂತ ವೈವಿಧ್ಯಮಯವಾಗಿದೆ ಹುಟ್ಟಿನಿಂದ ಹಿಡಿದು ಸಾಯುವ ತನಕ ಅನೇಕ ಪದಗಳನ್ನು ನಮ್ಮ ಜನಪದದಲ್ಲಿ ಕಾಣಬಹುದು ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.
ನಮ್ಮ ಕಾಡುಗೊಲ್ಲರ ಜನಪದವನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲ ಗೊಲ್ಲರಹಟ್ಟಿಗಳ ಜನಪದವನ್ನು ರಾಜ್ಯದ ದೇಶದ ಮೂಲೆ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಕಾಡುಗೊಲ್ಲರ ಜನಪದ ಸೊಗಡು ವತಿಯಿಂದ “ನಮ್ಮ ನಡಿಗೆ ಗೊಲ್ಲರಹಟ್ಟಿಯ ಜನಪದ ಕಲೆ ಕಡೆಗೆ” ಎಂಬುವ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಜನಪದ ಕಲಾವಿದರನ್ನು ಸಮಾಜದ ಮುಖ್ಯ ವಾಹಿನಿಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮ ಮೊದಲಿಗೆ ಹೊಸದುರ್ಗ ತಾಲೂಕು ಹೊನ್ನೇಕೆರೆ ಗೊಲ್ಲರಹಟ್ಟಿ ( ಅಮರಾವತಿ ಗೊಲ್ಲರಹಟ್ಟಿ) ಪ್ರಾರಂಭವಾಯಿತು.
ಕಾಡುಗೊಲ್ಲರ ನೆಲಮೂಲ ಜನಪದ ಸಂಸ್ಕೃತಿ, ಗೊಲ್ಲರಹಟ್ಟಿ ಇತಿಹಾಸ, ಗೊಲ್ಲರಹಟ್ಟಿ ಜನಪದ ಕಲಾವಿದರ ಜೀವನಶೈಲಿ ಪರಿಚಯಿಸುವ ನಿಟ್ಟಿನಲ್ಲಿ ಅವರ ಸಾಕ್ಷ್ಯ ಚಿತ್ರೀಕರಣ ( ಡಾಕ್ಯುಮೆ೦ಟರಿ ) ಮಾಡುತ್ತಿದೆ.
ವರದಿ: ಶಶಿ ಬಿ ಈಶ್ವರಗೆರೆ, ಚಿತ್ರದುರ್ಗ