ಬೆಂಗಳೂರು: ನಮ್ಮ ಮೆಟ್ರೋ ದರವನ್ನು ಶೇ.47ರಷ್ಟು ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಲಾಗಿತ್ತು. ಈ ಬೆನ್ನಲ್ಲೇ ಅಷ್ಟೇ ಸಲೀಸಾಗಿ ಪ್ರಯಾಣಿಕರು ಬಿಎಂಆರ್ ಸಿಎಲ್ ಗೆ ಶಾಕ್ ಎನ್ನುವಂತೆ ಬರೋಬ್ಬರಿ 6 ಲಕ್ಷ ಪ್ರಯಾಣಿಕರು ಮೆಟ್ರೋ ಪ್ರಯಾಣವನ್ನೇ ತ್ಯಜಿಸಿದ್ದಾರೆ.
ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಪ್ರಯಾಣದರವನ್ನು ಏರಿಕೆ ಮಾಡಲಾಗಿತ್ತು. ದುಪ್ಪಟ್ಟು ಪ್ರಯಾಣ ದರ ಹೆಚ್ಚಳದ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಮೆಟ್ರೋ ಪ್ರಯಾಣವನ್ನು ಬಾಯ್ ಕಾಟ್ ಮಾಡುವುದಾಗಿ ಘೋಷಿಸಿದ್ದರು.
ಈ ಬೆನ್ನಲ್ಲೇ ಕೆಲ ಸ್ಟೇಜ್ ಗಳಲ್ಲಿ ವ್ಯತ್ಯಾಸವಾಗಿದ್ದಂತ ದರವನ್ನು ಬಿಎಂಆರ್ ಸಿಎಲ್ ಸರಿ ಪಡಿಸಿತ್ತು. ಆದರೂ ಶೇ.47ರಷ್ಟು ಪ್ರಯಾಣ ದರ ಹೆಚ್ಚಳ ಹಾಗೆಯೇ ಮುಂದುವರಿದಿತ್ತು. ಈ ಹಿನ್ನಲೆಯಲ್ಲಿ ಸುಮಾರು 6.26 ಲಕ್ಷ ಪ್ರಯಾಣಿಕರು ಮೆಟ್ರೋವನ್ನು ತ್ಯಜಿಸಿದ್ದಾರೆ. ಆ ನಂತ್ರ ಪರ್ಯಾಯ ಸಾರಿಗೆಗಳತ್ತ ಮುಖ ಮಾಡಿರುವುದಾಗಿ ತಿಳಿದು ಬಂದಿದೆ.