ತುಮಕೂರು: ರಾಜ್ಯದಲ್ಲಿ ಮಕ್ಕಳ ಹಠಾತ್ ಸಾವು ಪ್ರಕರಣಗಳು ಮುಂದುವರೆದಿವೆ. ತುಮಕೂರಲ್ಲಿ ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭೈರಾಪುರದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ 9.30ಕ್ಕೆ 16 ವರ್ಷದ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ವಿದ್ಯಾರ್ಥಿ ರಾಹುಲ್ ಕುಸಿದು ಬಿದ್ದಿದ್ದಾನೆ. ಆತನನ್ನು ಹುಳಿಯಾರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಆದರೇ ಹೃದಯಾಘಾತಕ್ಕೆ ಒಳಗಾಗಿದ್ದಂತ ರಾಹುಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ರಾಹುಲ್ ಭೈರಾಪುರ ಗ್ರಾಮದ ಜಯರಾಂ ಎಂಬುವರ ಪುತ್ರನಾಗಿದ್ದಾನೆ.
‘ಆಯುಷ್ಮಾನ್ ಕಾರ್ಡ್’ ಪ್ರಯೋಜನಗಳೇನು? ಯಾರು ಅರ್ಹರು? ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ | Ayushman Card Yojana
ಬೊಮ್ಮಾಯಿಯವರೇ, ನೀವು ಸಿಎಂ ಆಗಿ ಏನು ಕಡಿದು ಕಟ್ಟೆ ಹಾಕಿದ್ದೀರಿ?: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ