ಭೀಕರ ರಸ್ತೆ ಅಪಘಾತದಲ್ಲಿ 12 ವಿದ್ಯಾರ್ಥಿಗಳು ದುರಂತ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬ್ರೆಜಿಲ್‌ನ ಆಗ್ನೇಯ ಪ್ರದೇಶದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ತುಂಬಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 12 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಬ್ರೆಜಿಲ್‌ನ ಸಾವೊ ಪಾಲೊದಿಂದ ಸುಮಾರು 370 ಕಿಲೋಮೀಟರ್ ದೂರದಲ್ಲಿರುವ ನುಪೊರಂಗದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ತುಂಬಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ಫೋಟೋಗಳು ಈಗ ಹೊರಬಂದಿದ್ದು ಅವು ತುಂಬಾ ಭಯಾನಕವಾಗಿವೆ. ಇವುಗಳನ್ನು ನೋಡಿದರೆ ಅಪಘಾತ ಎಷ್ಟು ನೋವಿನಿಂದ ಕೂಡಿರಬೇಕೆಂದು ನೀವು ಊಹಿಸಬಹುದು.
#Nacional 》Grave Accesibilidad de tránsito en Brasil.
El accidente ocurrió en la carretera Waldir Canevari, donde un autobús que transportaba estudiantes universitarios chocó contra un camión, dejando un saldo de 12 fallecidos y 21 heridos. pic.twitter.com/3w8vIq8c4O
— MatutinoSV 🇳🇮 (@SvMatutino) February 21, 2025
ಈ ಭೀಕರ ಅಪಘಾತದಲ್ಲಿ 12 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 21 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳೆಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಕೆಲವು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಎಲ್ಲಾ ವಿದ್ಯಾರ್ಥಿಗಳು ಫ್ರಾನ್ಸ್ ವಿಶ್ವವಿದ್ಯಾಲಯದವರು ಎಂದು ಹೇಳಲಾಗುತ್ತಿದೆ. ಈ ದುರಂತ ಘಟನೆಯ ನಂತರ ಬ್ರೆಜಿಲ್‌ನಲ್ಲಿ ಶೋಕದ ಅಲೆ ಆವರಿಸಿದೆ. ವಿದ್ಯಾರ್ಥಿಗಳ ದುರಂತ ಸಾವಿಗೆ ರಾಜ್ಯ ಸರ್ಕಾರ ಕೂಡ ದುಃಖ ವ್ಯಕ್ತಪಡಿಸಿದ್ದು, ಮೂರು ದಿನಗಳ ಅಧಿಕೃತ ಶೋಕಾಚರಣೆ ಘೋಷಿಸಿದೆ.