ಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿಸಿ ಬಿ-ಖಾತಾ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಸರ್ಕಾರಿ ಹಾಗೂ ಸರ್ಕಾರದ ಅಧೀನ ಇಲಾಖೆ, ನಿಗಮ, ಮಂಡಳಿಗಳ ಜಾಗಗಳನ್ನು ಹೊರತುಪಡಿಸಿ, ಅನಧಿಕೃತ ಬಡಾವಣೆ, ಭೂ ಪರಿವರ್ತನೆ ಹೊಂದದೆ ಸ್ವಂತವಾಗಿ ತಮ್ಮದೇ ಮಾಲೀಕತ್ವ ಹೊಂದಿದ ನಿವೇಶನ/ಜಾಗಗಳಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ನಿವೇಶನ/ಕಟ್ಟಡಗಳನ್ನು 2024 ಸೆ.10 ರ ಒಳಗಾಗಿ ನೋಂದಾವಣೆ ಮೂಲಕ ಖರೀದಿ ಮಾಡಿದಂತಹ ಆಸ್ತಿಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಬಿ-ಖಾತೆ ಪಡೆಯಬಹುದಾಗಿದೆ.
ಒಂದು ಬಾರಿ ಮಾತ್ರ ಮೇ 10 ರೊಳಗಾಗಿ ಅರ್ಜಿ ಸಲ್ಲಿಸಿ 2024-25ನೇ ಸಾಲಿನ ಆಸ್ತಿ ತೆರಿಗೆಯ 02 ಪಟ್ಟು ದಂಡ ಪಾವತಿಸಿ, ಮಹಾನಗರ ಪಾಲಿಕೆಯಲ್ಲಿ ನಮೂನೆ-2ಎ ಮತ್ತು ಇತರೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ-3ಎ ಪಡೆಯಲು ಅವಕಾಶ ನೀಡಲಾಗಿದೆ.
ಬಿ’ ರಿಜಿಸ್ಟರ್ ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆ
ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ:10.09.2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ (ಆಸ್ತಿ ತೆರಿಗೆ 02 ಪಟ್ಟು ಮೊತ್ತದ ದಂಡದೊAದಿಗೆ), ಮಾಲೀಕರ ಫೋಟೋ ಮತ್ತು ಸ್ವತ್ತಿನ (4 ಪಾರ್ಶ್ವಗಳನ್ನು ತೋರಿಸುವಂತೆ ಪಡೆದ) ಫೋಟೋ, ಸರ್ಕಾರದ ಇಲಾಖೆಗಳಿಂದ ವಿತರಿಸಿದ ಗುರುತಿನ ಚೀಟಿ.
ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಿ ಬಿ-ಖಾತಾ ಪಡೆಯಬಹುದು. ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ನೇರವಾಗಿ ಸಂಬಂಧಿಸಿದಂತೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿ, ತಮ್ಮ ಆಸ್ತಿಗಳನ್ನು ಬಿ-ಖಾತೆಯಲ್ಲಿ ಸೇರ್ಪಡೆಗೊಳಿಸಿಕೊಳ್ಳಲು ಕಲ್ಪಿಸಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು.
ಸಹಾಯವಾಣಿ ಕೇಂದ್ರ
ಬಳ್ಳಾರಿ ಮಹಾನಗರ ಪಾಲಿಕೆಯ ವೀರೇಶಯ್ಯ(ಮೊ.7019141268), ಅಬ್ದುಲ್ ಖಾದರ್ ಎಸ್.ಕೆ(ಮೊ.9845469264), ಕೆ.ವೆಂಕಟೇಶ್(ಮೊ.9986174981).
ಸಿರುಗುಪ್ಪ ನಗರಸಭೆಯ ರಾಜಭಕ್ಷ ಮೊ.9036525396, ಕಂಪ್ಲಿ ಪುರಸಭೆಯ ಸಿ.ಪ್ರಶಾಂತ್ ಮೊ.9916907008, ಸಂಡೂರು ಪುರಸಭೆಯ ದಿನಕರ್ ಮೊ.7899696662, ಕುರುಗೋಡು ಪುರಸಭೆಯ ಮೋಹನ್ ಶಾಸ್ತಿçà ಮೊ.9980865286, ಕುರೇಕುಪ್ಪ ಪುರಸಭೆಯ ರವಿ.ಎಂ ಮೊ.8880949944, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಸುಬ್ರಮಣ್ಯಂ ಮೊ.9980863962, ಕುಡತಿನಿ ಪಟ್ಟಣ ಪಂಚಾಯಿತಿಯ ಬಸವರಾಜ ಮೊ.9844772449 ಗೆ ಸಂಪರ್ಕಿಸಬಹುದು.