ಮುಂಬೈ: ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮದ ಒಂದೆರಡು ಎಪಿಸೋಡ್ಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಾಖಿ ಸಾವಂತ್ ಅವರಿಗೆ ಮಹಾರಾಷ್ಟ್ರ ಸೈಬರ್ ಸೆಲ್ ಸಮನ್ಸ್ ನೀಡಿದೆ
ಅವರೊಂದಿಗೆ ಕಾರ್ಯಕ್ರಮದ ವಿವಾದಾತ್ಮಕ ಸಂಚಿಕೆಯ ಭಾಗವಾಗಿದ್ದ ಯೂಟ್ಯೂಬರ್ಗಳಾದ ರಣವೀರ್ ಅಲ್ಲಾಬಾಡಿಯಾ ಮತ್ತು ಆಶಿಶ್ ಚಂಚ್ಲಾನಿ ಅವರಿಗೂ ತಮ್ಮ ಹೇಳಿಕೆಗಳನ್ನು ದಾಖಲಿಸಲು ಕೇಳಲಾಗಿದೆ.
ರಾಖಿಗೆ ಸಮನ್ಸ್ ಕಳುಹಿಸಲಾಗಿದ್ದು, ಫೆಬ್ರವರಿ 27 ರಂದು ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಐಜಿ ಯಶಸ್ವಿ ಯಾದವ್ ಎಎನ್ಐಗೆ ತಿಳಿಸಿದ್ದಾರೆ. ದುಬೈಗೆ ನೆಲೆ ಬದಲಿಸಿರುವ ನಟಿ ತನ್ನ ಹೇಳಿಕೆಯನ್ನು ದಾಖಲಿಸಲು ಮುಂಬೈಗೆ ಬರುತ್ತಾರೆಯೇ ಎಂಬುದು ಇನ್ನೂ ತಿಳಿದಿಲ್ಲ.