ಪುಣೆ:ಪುಣೆಯ ಮಂಜರಿ ಪ್ರದೇಶದ ಧ್ವನಿವರ್ಧಕ ಕಾರ್ಖಾನೆಯಲ್ಲಿ ಶುಕ್ರವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪುಣೆ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಪ್ರಕಾರ, ಮುಂಜಾನೆ 4.45 ಕ್ಕೆ ವರದಿಯಾದ ಬೆಂಕಿಯು ಕಾರ್ಖಾನೆಯ 6,000 ಚದರ ಅಡಿ ಆವರಣದಲ್ಲಿ ತಗಡಿನ ಶೆಡ್ ಗಳಿಗೆ ಆವರಿಸಿದೆ.
ಸ್ಪೀಕರ್ ಗಳು, ಆಂಪ್ಲಿಫೈಯರ್ ಗಳು, ಕತ್ತರಿಸುವ ಯಂತ್ರಗಳು, ಮರದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟುಹೋಗಿವೆ.ಪುಣೆ ಮತ್ತು ಪುಣೆ ಮೆಟ್ರೋಪಾಲಿಟನ್ ರೀಜನ್ ಡೆವಲಪ್ಮೆಂಟ್ ಅಥಾರಿಟಿ (ಪಿಎಂಆರ್ಡಿಎ) ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ 45 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದರು.
ಬೆಂಕಿಯ ಕಾರಣವನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.