ಸುದ್ದಿ ಮೂಲ: ಪ್ರಜಾಕಹಳೆ, ತುಮಕೂರು ಕನ್ನಡ ದಿನಪತ್ರಿಕೆ, ಸಂಪಾದಕರು : ರಘು ಎ.ಎನ್
ಮಧುಗಿರಿ : ದೇವರ ಹೆಸರಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಪೂಜೆ ಮಾಡಿಸಿದರೆ ದೇವರು ಸಂತಸ ಪಡುವುದಿಲ್ಲ ಪ್ರಯಾಗ್ ರಾಜ್‌ಗೆ ಹೋಗಿ ಕೊಳಕು ನೀರಲ್ಲಿ ಮುಳುಗಿದರೆ ದೊರೆಯುವುದಿಲ್ಲ. ಬಡ ಪುಣ್ಯ ಜನರ ಸೇವೆ ಮಾಡಿ, ಅವರಿಗೆ ಒಳಿತು ಮಾಡಿದಾಗ ಮಾತ್ರ ದೇವರು ಒಲಿಯುತ್ತಾನೆ. ಬಡ ಜನರ ಸೇವೆಯಲ್ಲೇ ನಾನು ದೇವರನ್ನು ಕಾಣುತ್ತಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್. ರಾಜಣ್ಣನವರ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಮಡಿವಾಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಲಕ್ಷಾಂತರ ಹಣ ಖರ್ಚು ಮಾಡುವ ಬದಲು ಅದೇ ಹಣವನ್ನು ನೊಂದವರಿಗೆ ಬಡಜನರಿಗೆ ಅರ್ಥಿಕ ಶಕ್ತಿ ಇಲ್ಲದವರಿಗೆ ಸಹಾಯ ಮಾಡಿದರೆ ಅ ಬಡಜನರ ಆಶೀರ್ವಾದವೇ ನಮಗೆ ದೇವರ ಆಶೀರ್ವಾದದಂತೆ ನಮ್ಮ ನಮ್ಮ ಊರುಗಳಲ್ಲಿ ದೇವರಿಲ್ಲವಾ ನಮ್ಮೂರಲ್ಲೂ ನಮ್ಮ ಪೂರ್ವಿಕರು ಪೂಜಿಸುತ್ತ ಬಂದಿರುವ ದೇವರಿದ್ದು,
ಬಡ ಜನರ ಸೇವೆ ಮಾಡಿ, ಅವರ ನೆರವಿಗೆ ದಾವಿಸಿ ಅವರಿಗೆ ಒಳಿತು ಮಾಡಿದಾಗ ಮಾತ್ರ ದೇವರು ಒಲಿಯುತ್ತಾನೆ. ಹಾಗೆಂದು ಅಲ್ಲಿಗೆ ಹೋಗಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಅಷ್ಟೊಂದು ವೈಭವೀಕರಣ ಸರಿಯಲ್ಲ. ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮೂರಲ್ಲೇ ದೇವರು ಒಲಿಯುತ್ತಾನೆಎಂದರು.
ಕೆಲ ರಾಜಕಾರಣಿಗಳು ಓಟಿಗಾಗಿ ಮಾತನಾಡುತ್ತಾರೆ. ನಾನೂ ರಾಜಕಾರಣಿಯೇ ಆದರೆ ಓಟಿಗಾಗಿ ಎಂದಿಗೂ ಸುಳ್ಳು ಹೇಳುವುದಿಲ್ಲ. ಇಂತಹ ಕ್ಷೇತ್ರದಲ್ಲಿ (ಮಧುಗಿರಿ)ನನಗೆ 36 ಸಾವಿರ ಲೀಡ್ ನೀಡಿದ್ದು, ಕ್ಷೇತ್ರದ ಜನತೆಯ ಋಣ ತೀರಿಸಬೇಕಿದ್ದು, ತಳ ಸಮುದಾಯಗಳ ಆಶೀರ್ವಾದ ನನಗೆ ಸದಾ ಇರುತ್ತದೆ. ಹಸಿದವರಿಗೆ ಊಟ ನೀಡಿದಾಗ ಮಾತ್ರ ಹಸಿವಿನ ಮಹತ್ವ ದೊರೆಯಲಿದೆ. ತಳ ಸಮುದಾಯಗಳಿಗೆ ರಾಜಕೀಯಅಧಿಕಾರ ದೊರೆತಾಗ ಮಾತ್ರ ಅದರ ಅಭಿವೃದ್ಧಿ ಸಾಧ್ಯ. ಅಸಹಾಯಕರು, ಧ್ವನಿ ಇಲ್ಲದವರಿಗೆ ಧ್ವನಿನೀಡಬೇಕು, ಸಮಪಾಲು-ಸಮುಬಾಳು ಎಂಬುದುಮಾತಿಗೆ ಸೀಮಿತವಾಗಿರದೇ ಕೃತಿಯಲ್ಲಿ ತೋರಿಸಬೇಕು.
ರಾಜಕೀಯ ಅಧಿಕಾರ ತಳ ಸಮುದಾಯಗಳಿಗೂ ದೊರೆಯಬೇಕು. ನಾನು ಕ್ಷೇತ್ರದ ಎಲ್ಲ ಜನರ ಶಾಸಕ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂಬುದೇ ನನ್ನ ಆಶಯ. ನಾನು ಯಾವುದೇ ಪಕ್ಷಕ್ಕೆ ಸೀಮಿತ ಅಲ್ಲ. ನಾನು ಸಹಕಾರಿಯಾಗಿ ಕ್ಷೇತ್ರದ ಎಲ್ಲ ಜನರ ಒಳಿತಿಗಾಗಿ ಶ್ರಮಿಸುವುದೇ ನನ್ನ ಆದ್ಯ ಕರ್ತವ್ಯ. 50 ವರ್ಷಗಳ ರಾಜಕೀಯ ಜೀವನದಲ್ಲಿ ಒಳಿತಿಗೆ ಮಾತ್ರ ನಾನು ಬೆಲೆ ನೀಡುತ್ತೇನೆ ಎಂದರು. ಸಮಾಜವನ್ನು ಸಂಘಟನೆ ಮಾಡುವ ಉದ್ದೇಶದಿಂದ ಜಯಂತಿಗಳ ಆಚರಣೆ ಬಹಳ ಮುಖ್ಯ ಇದುಮುಂದಿನ ಪೀಳಿಗೆಗೆ ಉತ್ತಮ ಸಂದೇಶ ಹಸ್ತಾಂತರಿಸಿದಂತಾಗುತ್ತದೆ. 12 ನೇ ಶತನಾನದಲ್ಲೇ ಮಾಚಿದೇವರು ಸಮಾಜಕ್ಕೆ ಹಲವಾರು ಸಂದೇಶಗಳನ್ನು ನೀಡಿದ್ದು, ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಮಹನೀಯರನ್ನು ಕೇವಲ ಒಂದು ಜಾತಿಗಳಿಗೆ ಸೀಮಿತಗೊಳಿಸದೇ ಎಲ್ಲಾ ಸಮುದಾಯಗಳೂ ಸೇರಿ ಮಹನೀಯರ ಜಯಂತಿಗಳನ್ನು ಆಚರಿಸಬೇಕು ಎಂಬ ಉದ್ದೇಶದಿಂದ ದಾರ್ಶನಿಕರ ಜಯಂತಿಯನ್ನು ಈ ಹಿಂದೆ ಯಲ್ಲೂರು ಗ್ರಾಮದಲ್ಲಿ ಆಚರಿಸಲಾಗಿತ್ತು. ದಾರ್ಶನಿಕರು ಸಮಾಜಕ್ಕೆ ಒಳಿತನ್ನು ಬಯಸುವ ಉದ್ದೇಶದಿಂದ ಸಂದೇಶಗಳನ್ನು ನೀಡಿದ್ದು, ದಾರ್ಶನಿಕರ ಜಯಂತಿಯಲ್ಲಿ ಎಲ್ಲಾ ಸಮುದಾಯಗಳ ಮಹನೀಯರೂ ಭಾಗಿಯಾಗಬೇಕು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಎಲ್ಲರಲ್ಲೂ ಸಮಾನತೆ ಕಾಣಬೇಕು. ಪರಸರ ಪ್ರೀತಿ ವಿಶ್ವಾಸ ದೊರಕಿಸಿಕೊಂಡು ಹೋಗುವ ಮೂಲಕ ಸ್ವಾಭಿಮಾನದಿಂದ ಬದುಕುವ ವಾತಾವಣ ನಿರ್ಮಾಣವಾಗಬೇಕು.ಹಠ, ಛಲ,ಗುರಿ ಇಟ್ಟಕೊಂಡಾಗ ಮಾತ್ರ ತಳ ಸಮಯ ದಾಯಗಳ ಯಶಸ್ಸು ಸಾಧ್ಯ. ತಳ ಸಮುದಾಯಗಳು ಬಹಳಷ್ಟು ಮುಗ್ಧತೆಯನ್ನು ಹೊಂದಿದ್ದು, ಎಲ್ಲಿಯವರೆಗೂ ತಮ್ಮ ಮಕ್ಕಳಿಗೆ ವಿದ್ಯಾವಂತರನ್ನಾಗಿಸುವುದಿಲ್ಲವೋ ಅಲ್ಲಿಯವರೆಗೂ ತಳ ಸಮುದಾಯಗಳ ಅಭಿವೃದ್ಧಿ ಸಾಧ್ಯವಿಲ್ಲ. ಸರ್ಕಾರ ಶಿಕ್ಷಣಕ್ಕಾಗಿ ಅನೇಕ ಸವಲತ್ತುಗಳನ್ನು ನೀಡಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ವಿದ್ಯೆಯಿಂದ ಮಾತ್ರ ಮಕ್ಕಳ ಭವಿಷ್ಯತ್ತು ನಿರ್ಮಾಣವಾಗಲು ಸಾಧ್ಯ. ಅಸಹಾಯಕ ಸಮುದಾಯಗಳಿಗೆ ರಾಜಕೀಯ ಅಧಿಕಾರ ದೊರೆತಾಗ ಮಾತ್ರ ಸಮುದಾಯಗಳ ಏಳಿಗೆ ಸಾಧ್ಯ. ಅನ್ನಪೂರ್ಣಮ್ಮ ವರದಿ ಜಾರಿಗೆ ಮಡಿವಾಳ ಸಮುದಾಯ ಮನವಿ ಮಾಡಿದ್ದು, ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಇತ್ತೀಚೆಗೆ ನನ್ನ ಮೇಲೂ ದೊಡ್ಡ ದೊಡ್ಡವರು ಬಿದ್ದಿ ದ್ದಾರೆ ಇದು ರಾಜಕಾರಣದಲ್ಲಿ ಮಾಮೂಲು ನಾನು ನೇರವಾಗಿ ಮಾತನಾಡುತ್ತೇನೆ ಅಷ್ಟೇ ನನಗೆ ಯಾರು ಶತ್ರುಗಳಿಲ್ಲ ನನ್ನ ನೇರನುಡಿ ಕೆಲವರು ಸಹಿಸಿಕೊಳ್ಳದೆ ನನ್ನ ಮೇಲೆ ಬೀಳುತ್ತಾರೆ ನಾನು ದಲಿತರಿಗೆ ಅಧಿಕಾರ ಸಿಗಬೇಕು ಎಂದು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ ಇದರಲ್ಲಿ ಸಾಮಾಜಿಕ ನ್ಯಾಯ ಇದೆ ನನ್ನ50 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ ನಮ್ಮೇಲೆ ಯಾರೇ ಬಿದ್ದರು ತಲೆ ಕೆಡಿಸಿಕೊಳ್ಳುವುದಿಲ್ಲ ನೊಂದವರ ಸೇವೆ ಮಾಡುತ್ತಾ ಸಾಗುವುದೇ ನನ್ನ ಕರ್ತವ್ಯ -ಕೆ.ಎನ್.ರಾಜಣ್ಣ.
ಸರ್ವಜ್ಞವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ, ನಮ್ಮ ಕುಲ ಕಸುಬುಗಳನ್ನು ಇಂದು ಅವನತಿಯ ಅಂಚಿಗೆ ತಳ್ಳುತ್ತಿರುವುದು ವಿಷಾದನೀಯ. ತಳ ಸಮುದಾಯಗಳನ್ನು ಗುರುತಿಸಿ ವಿಧಾನ ಪರಿಷತ್ ಗೆ ಆಯ್ಕೆಮಾಡಬೇಕು ಎಂದು ಧ್ವನಿ ಎತ್ತಿದವರು ಸಹಕಾರ ಸಚಿವ ಕೆ.ಎನ್.ರಾಜಣ್ಣನವರು. ಇದು ಸಚಿವರಿಗೆ ತಳ ಸಮುದಾಯಗಳ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಡಿ ವೈ
ಎಸ್ ಪಿ ಮಂಜುನಾಥ್, ಡಿಡಿಪಿಐ ಗಿರಿಜಾ, ತಾ.ಪಂ ಇಒ ಲಕ್ಷ್ಮಣ್, ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್, ಜಿ.ಪಂ ಮಾಜಿ ಉಪಾಧ್ಯಕ್ಷ ಮುದಿಮಡುಗು ರಂಗಶಾಮಯ್ಯ ಮಡಿವಾಳ ಸಂಘದ ಪದಾಧಿಕಾರಿಗಳಾದ ಲಕ್ಷ್ಮಿಕಾಂತಯ್ಯ ಇತರರಿದ್ದರು.