ಕಾರವಾರ: ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲೇ ಬೆಡ್ ರೂಮ್ ಮಾಡಿಕೊಂಡಿದ್ದಂತ ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕನನ್ನು ಅಮಾನತುಗೊಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಂಬುವರು ಇಲಾಖೆಯ ಕಚೇರಿಯ ಒಂದು ಕೋಣೆಯನ್ನು ಬೆಡ್ ರೂಮ್ ಮಾಡಿಕೊಂಡಿದ್ದರು. ಆ ರೂಮ್ ನಲ್ಲಿಯೇ ಮಂಚ, ಹಾಸಿಗೆ ಹಾಕಿಕೊಂಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು.
ಈ ವರದಿಯ ನಂತ್ರ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಅವರು ಗಂಭೀರವಾಗಿ ಪರಿಗಣಿಸಿದ್ದರು. ಕೂಡಲೇ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದರು. ಈ ಸೂಚನೆಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಉಲಾಖೆಯ ಉಪ ನಿರ್ದೇಶಕ ಜಯಂತ್ ನನ್ನು ಅಮಾನತುಗೊಳಿಸಲಾಗಿದೆ.
BIG NEWS: ‘OPS ಜಾರಿ’ ಮಾಡಿಯೇ ತೀರುತ್ತೇವೆ: ಡಿಸಿಎಂ ಡಿ.ಕೆ ಶಿವಕುಮಾರ್ ಭರವಸೆ
BREAKING : ಪಾಕ್ ತಂಡಕ್ಕೆ ಮತ್ತೊಂದು ಶಾಕ್ : `ಚಾಂಪಿಯನ್ಸ್ ಟ್ರೋಫಿ’ಯಿಂದ `ಫಖರ್ ಜಮಾನ್’ ಔಟ್.!