ಚಿಕ್ಕಬಳ್ಳಾಪುರ: ರಾಜ್ಯದಲ್ಲೊಂದು ವಿಚಿತ್ರ ಘಟನೆ ಎನ್ನುವಂತೆ ದೇವರ ಹುಂಡಿಯ ಖಾತೆಯಲ್ಲಿದ್ದಂತ 60 ಲಕ್ಷ ಹಣವನ್ನೇ ಸರ್ಕಾರಿ ಅಧಿಕಾರಿಯೊಬ್ಬ ತನ್ನ ಪತ್ನಿಯ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಇಂತಹ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿದೆ.
ದೊಡ್ಡಬಳ್ಳಾಪುರದ ಸಾಸಲು ಹೋಬಳಿಯ ರೆವೆನ್ಯೂ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್ ಎಂಬುವರೇ ಈ ರೀತಿಯ ಕೃತ್ಯವೆಸಗಿರುವಂತ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಸಾಸಲು ಹೋಬಳಿಗೆ ಬರುವ ಮೊದಲು ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯ ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲೇ ಸುಮಾರು 60 ಲಕ್ಷ ದೇವಸ್ಥಾನದ ಹುಂಡಿಯ ಹಣವನ್ನೇ ಪತ್ನಿ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
2023ರಿಂದ ಈವರೆಗೆ ಇಬ್ಬರು ತಹಶೀಲ್ದಾರ್, ಓರ್ವ ಕೇಸ್ ವರ್ಕರ್ ಸಹಿ ಹಾಗೂ ಸೀಲ್ ಪೋರ್ಜರಿ ಮಾಡಿ ಹೇಮಂತ್ ಕುಮಾರ್, 60 ಲಕ್ಷ ಹಣವನ್ನು ಹಲವು ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರೆವೆನ್ಯೂ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡರೂ ಮುಜರಾಯಿ ಇಲಾಖೆಯ ಚೆಕ್ ಬುಕ್ ವಾಪಾಸ್ ನೀಡದೇ, ಅದರಿಂದಲೂ ಹಣ ಡ್ರಾ ಮಾಡಿಕೊಂಡ ಆರೋಪ ಹೇಮಂತ್ ವಿರುದ್ಧ ಕೇಳಿ ಬಂದಿದೆ.
ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ತಹಶೀಲ್ದಾರ್ ಇಲಾಖೆ ಖಾತೆಯಲ್ಲಿನ ಹಣ ತಾಳೆಯಾಗದೇ ಲೂಟಿಯಾಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಹೇಮಂತ್ ಬಂದಿಸಿ, ಜೈಲಿಗಟ್ಟಿದ್ದಾರೆ.
ಅಚ್ಚರಿ ಎನ್ನುವಂತೆ ಇಲಾಖೆಗೆ ವಂಚಿಸಿದಂತ ಹಣದಿಂದಲೇ ಹೇಮಂತ್ ಕುಮಾರ್ ಮನೆಯನ್ನು ಕಟ್ಟಿದ್ದೇನೆ ಎಂಬುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಬಂಧಿತ ಆರೋಪಿಯನ್ನು ಕಂದಾಯ ಇಲಾಖೆಯು ಸೇವೆಯಿಂದ ಅಮಾನತುಗೊಳಿಸಲಾಗಿದೆ.
BIG NEWS: ಕರ್ನಾಟಕ ‘SSLC, ದ್ವಿತೀಯ PUC ಪರೀಕ್ಷೆ-1’ರ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
ಕೋಲಾರದ ವೇಮಗಲ್ ನಲ್ಲಿ 315 ಕೋಟಿ ಹೂಡಿಕೆ, 550 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ.ಪಾಟೀಲ