ನವದೆಹಲಿ: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಕುಟುಂಬ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಇಬ್ಬರೂ ಗಣ್ಯರು ಅನೇಕ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.
ಸುನಕ್ ಭಾರತದ ಉತ್ತಮ ಸ್ನೇಹಿತ ಮತ್ತು ಭಾರತ-ಯುಕೆ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಯುಕೆಯ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಲು ಸಂತೋಷವಾಗಿದೆ! ನಾವು ಅನೇಕ ವಿಷಯಗಳ ಬಗ್ಗೆ ಅದ್ಭುತ ಸಂಭಾಷಣೆ ನಡೆಸಿದೆವು. ಸುನಕ್ ಅವರು ಭಾರತದ ಉತ್ತಮ ಸ್ನೇಹಿತ ಮತ್ತು ಭಾರತ-ಯುಕೆ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಉತ್ಸುಕರಾಗಿದ್ದಾರೆ.” ಎಂದರು.
ಇದಕ್ಕೂ ಮುನ್ನ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಜಿ ರಿಷಿ ಸುನಕ್ ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಮಾರುಕಟ್ಟೆ ಆಧಾರಿತ ಹಣಕಾಸು ಸಂಬಂಧಗಳನ್ನು ಬಲಪಡಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸಂಭಾವ್ಯ ಹೊಸ ಮಾರ್ಗಗಳ ಬಗ್ಗೆ ಚರ್ಚಿಸಿದರು.
ಜಾಗತಿಕ ದಕ್ಷಿಣದ ಪ್ರಯೋಜನಕ್ಕಾಗಿ ಪರಸ್ಪರ ಹಿತಾಸಕ್ತಿಯ ಸಮಸ್ಯೆಗಳನ್ನು ಜಿ 7 ಕಾರ್ಯಸೂಚಿಗೆ ತರಲು ಕಾಮನ್ ವೆಲ್ತ್ ಅನ್ನು ಬಳಸಿಕೊಳ್ಳುವ ಮಹತ್ವವನ್ನು ಹಣಕಾಸು ಸಚಿವರು ಒತ್ತಿ ಹೇಳಿದರು.
ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಮತ್ತು ಪುತ್ರಿಯರಾದ ಕೃಷ್ಣ ಮತ್ತು ಅನೌಷ್ಕಾ ಅವರೊಂದಿಗೆ ಮಂಗಳವಾರ ಸಂಸತ್ ಭವನಕ್ಕೆ ಭೇಟಿ ನೀಡಿದರು. ಅವರೊಂದಿಗೆ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಕೂಡ ಇದ್ದರು.