ಬೆಂಗಳೂರು : ಆರ್ಥಿಕ ಸಾಕ್ಷರತಾ ಸಪ್ತಾಹ” ಅಂಗವಾಗಿ ಶಿಕ್ಷಣ ಇಲಾಖೆಯ ಸರ್ಕಾರಿ ಮಹಿಳಾ ಶಿಕ್ಷಕಿಯರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಆರ್ಥಿಕ ಸೇರ್ಪಡೆ ಮತ್ತು ಆರ್ಥಿಕ ಸಾಕ್ಷರತೆಯನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ವರ್ಷ, ಒಂದು ವಾರವನ್ನು ‘ಆರ್ಥಿಕ ಸಾಕ್ಷರತಾ ಸಪ್ತಾಹ (FLW)’ ಎಂದು ಗುರುತಿಸಿ, ಆರ್ಥಿಕ ಸಾಕ್ಷರತೆಯ ಬಗ್ಗೆ ಸಮಾಜದ ಜನರಿಗೆ ಜಾಗೃತಿ ಮೂಡಿಸಿ, ದೇಶದ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ. ಪ್ರಸ್ತುತ ದಿನಾಂಕ:24.02.2025 ರಿಂದ 28.02.2025ರ ಅವಧಿಯನ್ನು ‘ಆರ್ಥಿಕ ಸಾಕ್ಷರತೆ – ಮಹಿಳಾ ‘ (Financial literacy for women) ಎಂದು ಗುರುತಿಸಿ, ಮಹಿಳೆಯರಿಗೆ ಆರ್ಥಿಕ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಲು 2024-25ನೇ ಸಾಲಿನಲ್ಲಿ ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಮಹಿಳಾ ಶಿಕ್ಷಕಿಯರಿಗೆ ರಸಪ್ರಶ್ನೆ (Quiz Competition) ಸ್ಪರ್ಧೆಯನ್ನು ಆಯೋಜಿಸಿದೆ.
ಉದ್ದೇಶಗಳು:
‘ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷರತೆಯ ಬಗ್ಗೆ, ಅರಿವು ಮೂಡಿಸುವುದು.
ವಿದ್ಯಾರ್ಥಿಗಳಲ್ಲಿ ಸಣ್ಣ ಉಳಿತಾಯದ ಪ್ರಾಮುಖ್ಯತೆ ಹಾಗೂ ದೇಶದ ಆರ್ಥಿಕತೆಯ ಬಗ್ಗೆ, ಮಾಹಿತಿ ಒದಗಿಸುವುದು.
ಮಹಿಳೆಯರಲ್ಲಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿ, ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಹಾಯ ಮಾಡುವುದು.
ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳಸಿ, ಅವರಲ್ಲಿ ಬಲವಾದ ಆರ್ಥಿಕತೆಯನ್ನು ಬಳಸುವುದು.
ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ಕುಟುಂಬದ ಹಣಕಾಸುಗಳಿಗೆ ಪ್ರಯೋಜನಕಾರಿಯಾಗುವ ಮಾಡಿಕೊಡುವುದು. ಬುದ್ಧಿವಂತ ಆಯ್ಕೆಗಳನ್ನು ಮಾಡಲು ಅನುವು 1. ಸರ್ಕಾರಿ ಮಹಿಳಾ ನೌಕಕರಿಗೆ ಆರ್ಥಿಕ ಸಾಕರತೆಯ ಬಗ್ಗೆ ಅರಿವು ಮೂಡಿಸಲು ರಸಪ್ರಶ್ನೆ ಸ್ಪರ್ಧೆ.
ಸ್ಪರ್ಧೆಯ ಹಂತಗಳು: ಸ್ಪರ್ಧೆಯು 2 ಹಂತಗಳಲ್ಲಿ ನಡೆಯುತ್ತದೆ.
* ಮೊದಲನೆ ಹಂತ :-ಆನ್‌ಲೈನ್ ಮೂಲಕ ನಡೆಯುತ್ತದೆ.
ಎರಡನೇ ಹಂತ :- ಮುಖಾಮುಖಿಯಾಗಿ ಬೆಂಗಳೂರಿನಲ್ಲಿ ನಡೆಯುತ್ತದೆ.
ಸ್ಪರ್ಧೆಯ ನೋಂದಣಿ ಮತ್ತು ಪ್ರಕ್ರಿಯೆ:-
* ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಮಹಿಳಾ ಶಿಕ್ಷಕಿಯರಿಗೆ Online ಮೂಲಕ RBI ಬೆಂಗಳೂರು ರವರು ನೀಡಿರುವ website https://forms.office.com/r/UiMyfGyuz4 ৩০ ಶಿಕ್ಷಕಿಯರು ಸೇರಿ ತಮ್ಮ KGID ಸಂಖ್ಯೆ, ಶಾಲೆ, ಜಿಲ್ಲೆಯ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಸಲ್ಲಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸುವುದು ಸ್ಪರ್ಧೆಗೆ ನೀಡಿರುವ ವಿಷಯಗಳು ಈ ಲಿಂಕ್‌ನಲ್ಲಿ ಮಾಹಿತಿ ದೊರೆಯುತ್ತವೆ.
https://www.rbi.org.in/commonperson/English/scripts/home.aspx or
https://shorturl.at/94rQm
ಪ್ರಥಮ ಸ್ಥಾನ ಪಡೆದ ತಂಡವು ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಹಾಗೂ ವಿಜೇತರಾದ ತಂಡಕ್ಕೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು.
ಸ್ಪರ್ಧಾ ನಿಯಮಗಳು:
ಪ್ರಶ್ನೆಗಳು ಬಹು ಆಯ್ಕೆ ಪ್ರಶ್ನೆಗಳಾಗಿದ್ದು, ಬ್ಯಾಂಕ್ ವ್ಯವಹಾರ ಪದ್ಧತಿ,, ಭಾರತ ದೇಶದ ಆರ್ಥಿಕ ವ್ಯವಸ್ಥೆ, ಸಾಮಾನ್ಯ ಜ್ಞಾನ ಇತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತದೆ.
ಪ್ರತಿ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿಕ್ಷಕರಿಗೆ 40 ಬಹು ಆಯ್ಕೆಯ ಪ್ರಶ್ನೆಗಳಿಗೆ 11 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಹೆಚ್ಚು ಅಂಕ ಪಡೆದ ಶಿಕ್ಷಕರನ್ನು ಆಯ್ಕೆಗೆ ಪರಿಗಣಿಸಲಾಗುವುದು.
ಪ್ರಶ್ನೆ ಪತ್ರಿಕೆಯು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಇರುತ್ತವೆ.
ಪ್ರತಿ ಸರಿಯಾದ ಉತ್ತರಕ್ಕೆ 1 ಅಂಕ ಹಾಗೂ ತಪ್ಪು ಉತ್ತರ ಹಾಗೂ ಪ್ರಶ್ನೆಯನ್ನು ಬಿಟ್ಟಲ್ಲಿ 0 ಅಂಕ ನಿಗಧಿಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿರುವಾಗ ಶಿಕ್ಷಕರು ಯಾರ ಸಹಾಯವನ್ನೂ ಪಡೆಯಬಾರದು. ಈ ಕಾರ್ಯಕ್ರಮವು ಶಿಕ್ಷಕರ ಜ್ಞಾನಾರ್ಜನೆಯ ಬೆಳವಣಿಗೆಗಾಗಿ ಆಯೋಜಿಸಲಾಗಿದೆ.
* ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹಾಗೂ ವಿವಿಧ ಹಂತಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಲು ನಿಯಮಿತವಾಗಿ ವೆಬ್ ಪೋರ್ಟಲ್ ಗೆ ಭೇಟಿ ನೀಡುವುದು.
ಇಲಾಖೆಯಿಂದ ಪ್ರತ್ಯೇಕ ಸಂವಹನ ನಡೆಸುವುದಿಲ್ಲ.