ಬೆಂಗಳೂರು : ನಿಮ್ಮ ಬಳಿ ಬಿಬಿಎಂಪಿ ಖಾತೆ ಇಲ್ಲವೇ, ಕೈಬರಹ ಖಾತೆಯೂ ಸಹ ಇಲ್ಲವೇ? ಬಿಬಿಎಂಪಿಯಿಂದ ಆನ್‌ಲೈನ್ ಮೂಲಕ ಹೊಸ ಖಾತೆ ಪಡೆದುಕೊಳ್ಳಿ. ಬಿಬಿಎಂಪಿಯಲ್ಲಿ 10,000 ಹೊಸ ಖಾತೆಗಳನ್ನು ನೀಡಲಾಗುತ್ತಿದೆ.
ಹೊಸ ಖಾತೆಗೆ ಅರ್ಜಿ ಸಲ್ಲಿಸಲು ಸರಳ ವಿಧಾನಗಳು
1. ನಿಮ್ಮ ಮೊಬೈಲ್ ಮತ್ತು ಓಟಿಪಿ ಬಳಸಿ ಲಾಗಿನ್ ಆಗಿರಿ
2. ಕ್ರಯ/ನೋಂದಾಯಿತ ಪತ್ರದ ಸಂಖ್ಯೆಯನ್ನು ನಮೂದಿಸಿ (ಉಪ ನೋಂದಣಾಧಿಕಾರಿಯಿಂದ ವಿದ್ಯುನ್ಮಾನವಾಗಿ ಪಡೆಯಲಾಗುವುದು)
3. ಆಧಾರ್ ಪರಿಶೀಲನೆ
4. ಸ್ವತ್ತಿನ ಋಣಭಾರ ಪ್ರಮಾಣ ಪತ್ರ
5. ಬೆಸ್ಕಾಂ ಐಡಿ
6. ಸ್ವತ್ತಿನ ಛಾಯ ಚಿತ್ರ
7. ತಹಲ್‌ವರೆಗಿನ ಸ್ವತ್ತಿನ ತೆರಿಗೆಯನ್ನು ಪಾವತಿಸಿ
ನಿಮ್ಮ ಮಾಹಿತಿಯನ್ನು ಪರಿಶೀಲಿಸಿದ ನಂತರ ಹೊಸ ಖಾತೆಯನ್ನು ಆನ್‌ಲೈನ್ ಮೂಲಕ ವಿತರಿಸಲಾಗುವುದು. ಒಂದು ವೇಳೆ ನೀವು ಈಗಾಗಲೇ ಕೈಬರಹ ಖಾತೆ ಹೊಂದಿದ್ದಲ್ಲಿ ಹೊಸ ಖಾತೆಗಾಗಿ ಅರ್ಜಿ ಸಲ್ಲಿಸಕೂಡದು, ಒಂದು ವೇಳೆ ಈ ರೀತಿ ಮಾಡಿದ್ದಲ್ಲಿ ತಮ್ಮನ್ನು ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರನನ್ನಾಗಿ ಮಾಡಲಾಗುವುದು. ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಖಾತೆಯನ್ನು ಪಡೆಯಿರಿ
ವೆಬ್ ಸೈಟ್ : https://BBMP.Karnataka.gov.in/NewKhata. https://BBMPeAasthi.Karnataka.gov.in