ಮಂಡ್ಯ: ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿ ಸಂದರ್ಭದಲ್ಲಿ ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿಯನ್ನು ತಪ್ಪಿಸಲು ಸರ್ಕಾರ ಕರ್ನಾಟಕ ( ಮೈಕ್ರೋ) ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಅಧ್ಯಾದೇಶ 2025 ನ್ನು ಜಾರಿಗೊಳಿಸಿದ್ದು, ಜಿಲ್ಲಯಲ್ಲಿ ಈ ಅಧ್ಯಾದೇಶ ಕಟ್ಟುನಿಟ್ಟಾಗಿ ಅನುಷ್ಠಾನವಾಗಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು ಕರ್ನಾಟಕ ( ಮೈಕ್ರೋ) ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಅಧ್ಯಾದೇಶ 2025 ದಡಿ ಆರ್.ಬಿ.ಐ ಯಡಿ ನೊಂದಣಿಯಾಗಿರುವ ಹಣಕಾಸು ಸಂಸ್ಥೆಗಳು ಹಾಬರುವುದಿಲ್ಲ. ನೊಂದಣಿಯಾಗಿರುವ ಸಂಸ್ಥೆಗಳು ಸಾಲ ವಸೂಲಾತಿಯನ್ನು ಆರ್.ಬಿ.ಐ ನಿಯಮದಂತೆ ವಸೂಲಿ ಮಾಡಬೇಕು. ಉಲ್ಲಂಘನೆ ಕಂಡುಬಂದಲ್ಲಿ ಬಿ,ಎನ್.ಎಸ್ ಕಾಯ್ದೆ ಅಡಿ ದೂರು ದಾಖಲಿಸಬಹುದು ಎಂದರು
ನೊಂದಣಿಯಾಗಿರುವ ಅಥವಾ ನೊಂದಣಿಯಾಗದಿರುವ ಸಂಸ್ಥೆಗಳು ಸಾಲ ಅಥವಾ ಬಡ್ಡಿ ವಸೂಲಾತಿ ಸಂದರ್ಭದಲ್ಲಿ ಈ ಆಸ್ತಿಯನ್ನು ಅಡಮಾನ ಮಾಡಿಕೊಳ್ಳಲಾಗಿದೆ ಎಂದು ಗೋಡೆಗಳ ಮೇಲೆ ಬರೆಯುವ ಅಮಾನವೀಯ ಕೃತ್ಯ ಕಂಡುಬಂದರೆ ಜಿಲ್ಲಾಡಳಿತ ಸಹಿಸುವುದಿಲ್ಲ ಅವರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಕಡ್ಡಾಯ: ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರುಗಳು 30 ದಿನಗಳೊಳಗೆ ಅವುಗಳು ಕಾರ್ಯನಿರ್ವಹಿಸುತ್ತಿರುವ ಅಥವಾ ಮುಂದೆ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ಗ್ರಾಮಗಳು/ಪಟ್ಟಣಗಳ ಮಾಹಿತಿ. ವಿಧಿಸಿರುವ ಅಥವಾ ವಿಧಿಸಲು ಉದ್ದೇಶಿಸಿರುವ ಬಡ್ಡಿ ದರ. ಯುಕ್ತ ಜಾಗರೂಕ ನಿರ್ವಹಣಾ ಮತ್ತು ವಸೂಲಾತಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ನೊಂದಣಿ ಮಾಡಿಕೊಳ್ಳಬೇಕು ಎಂದರು
ವಸೂಲಾತಿ ಪ್ರಕ್ರಿಯೆಯನ್ನು ನಿರ್ವಹಿಸಲು ಅಧಿಕೃತಗೊಳಿಸಲಾದ ವ್ಯಕ್ತಿಗಳ ಪಟ್ಟಿ, ಸಾಲಗಾರನ ವಿವರಗಳನ್ನು (ಹೆಸರು, ವಿಳಾಸ, ಒಟ್ಟು ಸಾಲ, ವಸೂಲಾದ ಮೊತ್ತ, ಉಳಿದ ಬಾಕಿ) ಲಿಖಿತ ಮುಚ್ಚಳಿಕೆಯಲ್ಲಿ ಸಲ್ಲಿಸಿ ನೊಂದಣಿ ಮಾಡಿಕೊಳ್ಳುವುದು. ಸದರಿ ನೊಂದಣಿಯು ಒಂದು ವರ್ಷಕ್ಕೆ ಒಳಪಟ್ಟಿರುತ್ತದೆ ನಂತರ ನೊಂದಣಿಯನ್ನು ನವೀಕರಣ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಕೊಳ್ಳದ ಸ್ವಸಹಾಯ ಗುಂಪುಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರುಗಳು ಸಾಲ ನೀಡಲು ಅಥವಾ ವಸೂಲು ಮಾಡುವ ಅಧಿಕಾರ ಹೊಂದಿರುವುದಿಲ್ಲ. ಈ ಅಧ್ಯಾದೇಶದಡಿ ಯಾವುದೇ ಆಸ್ತಿಯನ್ನು ಅಡಮಾನ ಮಾಡಿಕೊಂಡು ಸಾಲ ನೀಡಲು ಅವಕಾಶವಿರುವುದಿಲ್ಲಿ ಎಂದರು.
ನೊAದಣಿ ಮಾಡಿಕೊಳ್ಳದೇ ಬಲವಂತ ವಸೂಲಾತಿ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಲ್ಲಿ ಅಥವಾ ದೂರುಗಳು ಬಂದಲ್ಲಿ ಈ ಅಧ್ಯಾದೇಶದಲ್ಲಿ ತಿಳಿಸಿರುವಂತೆ ದೂರು ದಾಖಲಾಸಿಲಾಗುವುದು ಹಾಗೂ ಈ ಪ್ರಕರಣದಲ್ಲಿ 10 ವರ್ಷಗಳ ಜೈಲುವಾಸ ಹಾಗೂ 5 ಲಕ್ಷ ರೂ ವರೆಗೂ ದಂಡ ವಿಧಿಸಲು ಅವಕಾಶವಿದೆ ಎಂದರು.
ನೊAದಣಿ ಮಾಡಿಕೊಂಡು ಸಾಲ ನೀಡುವ ಸಂದರ್ಭದಲ್ಲಿ ವಿಧಿಸುವ ಬಡ್ಡಿ, ವಸೂಲಾತಿಗೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಕನ್ನಡದಲ್ಲಿ ಲಿಖಿತವಾಗಿ ಸಾಲಗಾರರಿಗೆ ತಿಳಿಸಬೇಕು. ಬಲವಂತ ವಸೂಲಾತಿ ಕಂಡುಬಂದಲ್ಲಿ ಡಿ.ಒ.ಎಸ್.ಪಿ ತಮ್ಮ ಹಂತದಲ್ಲಿ ಸ್ವಯಂ ದೂರು ದಾಖಲಿಸಲು ಸಹ ಅವಕಾಶವಿದೆ ಎಂದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸ್ವಾಮಿ, ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಶಿವಮೂರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
BREAKING: ಮೈಸೂರು ವಿವಾದಿತ ಪೋಸ್ಟ್ ನಿಂದ ಗಲಾಟೇ ಕೇಸ್: ಆರೋಪಿ ಸತೀಶ್ ಗೆ ಜಾಮೀನು ಮಂಜೂರು
ಹುಬ್ಬಳ್ಳಿಯಲ್ಲೊಂದು ವಿಚಿತ್ರ ‘ಪ್ರೇಮ ಕಹಾನಿ’: 50 ವರ್ಷದ ‘ಅಂಕಲ್ ಮದುವೆ’ಯಾದ 18ರ ಯುವತಿ