ಉತ್ತರ ಕನ್ನಡ: ನೌಕಾನೆಲೆಯ ಮಾಹಿತಿ ಸೋರಿಕೆ ಸಂಬಂಧ ಈಗಾಗಲೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇಂದು ಮತ್ತೆ ನೌಕಾನೆಲೆಗೆ ಆಗಮಿಸಿದ್ದು, ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾರವಾರದ ನೌಕಾನೆಲೆಗೆ ಮತ್ತೆ ಎನ್ಐಎ ಅಧಿಕಾರಿಗಳು ಆಗಮಿಸಿದ್ದಾರೆ. 2024ರ ಆಗಸ್ಟ್ ನಲ್ಲಿ ವಿಚಾರಣೆ ನಡೆಸಿದ್ದಂತ ಎನ್ಐಎ ಇಂದು ಮತ್ತೆ ಆಗಮಿಸಿದ್ದಾರೆ.
ಮೂವರನ್ನು ವಿಚಾರಣೆ ನಡೆಸಿ, ನೋಟಿಸ್ ನೀಡಿದ್ದರು. ಮುದಗಾದ ವೇತನ್ ತಾಂಡೇಲ್, ತೊಡೂರು ಸುನೀಲ್ ಹಾಗೂ ಅಕ್ಷಯ್ ನಾಯ್ಕ್ ಎಂಬುವರನ್ನು ಎನ್ಐಎ ವಿಚಾರಣೆ ನಡೆಸಿತ್ತು.
ಇದೀಗ ಮತ್ತೆ ತನಿಖೆ ನಡೆಸಲು ಕಾರವಾರದ ನೌಕಾನೆಲೆಗೆ ಎನ್ಐಎ ತಂಡ ಆಗಮಿಸಿದೆ. ನೌಕಾನೆಲೆಯ ಅಧಿಕಾರಿಗಳನ್ನು ಭೇಟಿಯಾಗಲಿರುವಂತ ಎನ್ಐಎ, ಮಾಹಿತಿ ಸೋರಿಕೆ ಸಂಬಂಧ ತನಿಖೆ ನಡೆಸೋ ಸಾಧ್ಯತೆ ಇದೆ.
ರಾಜ್ಯ ಸರ್ಕಾರದಿಂದ ‘ಆರ್ಯ ವೈಶ್ಯ ಸಮುದಾಯ’ದವರಿಗೆ ಭರ್ಜರಿ ಸಿಹಿಸುದ್ದಿ
TCS Salary Hike: ‘TCS ಉದ್ಯೋಗಿ’ಗಳಿಗೆ ಗುಡ್ ನ್ಯೂಸ್: ಮಾರ್ಚ್ ನಲ್ಲಿ ಶೇ.4ರಿಂದ 8ರಷ್ಟು ವೇತನ ಹೆಚ್ಚಳ ಸಾಧ್ಯತೆ