ಧಾರವಾಡ: ಇಲ್ಲಿಂದ ಅಯೋಧ್ಯೆಗೆ ತೆರಳಿದ್ದಂತ ಕರ್ನಾಟಕದ ಎರಡು ಕುಟುಂಬಗಳ ಕಾರಿನ ಗ್ಲಾಸ್ ಒಡೆದಿರುವಂತ ಕಳ್ಳರು, 10 ಮೊಬೈಲ್, 20,000 ನಗದು ದೋಚಿ ಪರಾರಿಯಾಗಿರುವಂತ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಯೋಧ್ಯೆಗೆ ಧಾರವಾಡದಿಂದ 2 ಕುಟುಂಬಗಳು ಕಾರಿನಲ್ಲಿ ತೆರಳಿದ್ದರು. ಧಾರವಾಡದ ಶೆಟ್ಟರ್ ಕಾಲೋನಿಯ ಅರುಣಕುಮಾರ ಬಡಿಗೇರ ಹಾಗೂ ಮಾಳಮಡ್ಡಿಯ ಬಸವರಾಜ್ ಕೋಟ್ಯಾಳ್ ಕುಟುಂಬಸ್ಥರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿ, ಪುಣ್ಯ ಸ್ನಾನ ಮಾಡಿದ್ದರು.
ಇನ್ನೂ ಪ್ರಯಾಗ್ ರಾಜ್ ನಿಂದ ಅಯೋಧ್ಯೆಗೆ ತೆರಳಿದಂತ ಕುಟುಂಬಸ್ಥರು, ಕಾರು ಪಾರ್ಕಿಂಗ್ ಮಾಡಿ, ಅಯೋಧ್ಯೆ ರಾಮನ ದರ್ಶನಕ್ಕೆ ತೆರಳಿದ್ದರು. ಆ ಬಳಿಕ ಕಾರಿನ ಬಳಿ ಬಂದು ನೋಡಿದಾಗ ಗ್ಲಾಸ್ ಹೊಡೆದು, 10 ಮೊಬೈಲ್, 20,000 ರೂ ಹಣ ಹಾಗೂ ಎಟಿಎಂ ಕಾರ್ಡ್ ಸೇರಿದಂತೆ ಬಟ್ಟೆಗಳನ್ನು ಕದೀಮರು ಕದ್ದೊಯ್ದಿದ್ದಾರೆ.
ಅಯೋಧ್ಯೆಯಲ್ಲಿ ಮೊಬೈಲ್, ಹಣ ಕಳೆದುಕೊಂಡಿರುವಂತ ಧಾರವಾಡದ ಕನ್ನಡಿಗರ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಕುಂಭಮೇಳಕ್ಕೆ ಹೋಗುವಂತ ಕನ್ನಡಿಗರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
BREAKING: ಪಂಜಾಬಿನಿಂದ ಬೆಂಗಳೂರಿಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಏರ್ ಆಂಬುಲೆನ್ಸ್ ಮೂಲಕ ಆಗಮನ
ALERT : `ಬಾಟಲ್ ನೀರು’ ಕುಡಿಯುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!