ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಪತಿಯೊಬ್ಬ ತನ್ನ ಪತ್ನಿಯನ್ನೇ ಕಟ್ಟಡದಿಂದ ಕೆಳಗೆ ತಳ್ಳಿ ಹತ್ಯೆಗೈದಿದ್ದಾರೆ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಚೌಡದೇನಹಳ್ಳಿಯಲ್ಲಿ ಪತ್ನಿಯನ್ನೇ ಕಟ್ಟಡದಿಂದ ಕೆಳಗೆ ತಳ್ಳಿ ಪಾಪಿ ಪತಿಯೊಬ್ಬ ಹತ್ಯೆಗೈದಿರುವಂತ ಘಟನೆ ನಡೆದಿದೆ.
ಪತಿ-ಪತ್ನಿಯರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಉಂಟಾಗಿತ್ತು. ಈ ಜಗಳ ತಾರಕಕ್ಕೆ ಏರಿದಾಗ ಪತಿ, ಪತ್ನಿಯನ್ನು ಕಟ್ಟಡದ ಮೇಲಿನಿಂದ ಕೆಳಗೆ ತಳ್ಳಿದ್ದಾನೆ. ಈ ಘಟನೆಯಲ್ಲಿ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಸರ್ಜಾಪುರ ಠಾಣೆಯ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
BREAKING: ಅಮೇರಿಕಾದಿಂದ ಗಡಿಪಾರಾಗಿ ಅಮೃತಸರಕ್ಕೆ ಬಂದಿಳಿದ ಇಬ್ಬರನ್ನು ಕೊಲೆ ಪ್ರಕರಣದಲ್ಲಿ ಪೊಲೀಸರು ಅರೆಸ್ಟ್
SHOCKING : ಯುವಕನಿಗಾಗಿ ನಡು ರಸ್ತೆಯಲ್ಲೇ ಬಟ್ಟೆ ಹರಿದುಕೊಂಡು ಯುವತಿಯರ ಫೈಟ್.! VIDEO VIRAL