ಬೆಂಗಳೂರು: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಆರು ತಿಂಗಳ ಡೆವಲಪ್ ಮೆಂಟ್ ಪ್ರೊಫೆಷನಲ್ ಸರ್ಟಿಫಿಕೇಟ್ ಕೋರ್ಸ್ ತರಬೇತಿಗೆ ಸಂವಾದ – ಬದುಕು ಕಮ್ಯೂನಿಟಿ ಕ್ಯಾಂಪಸ್ ನಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತಂತೆ ಬದುಕು ಕೋರ್ಸ್ ನ ನಿರ್ದೇಶಕರಾದಂತ ಮುರುಳಿ ಮನೋಹರ್ ಕಾಟಿ ಅವರು ಮಾಹಿತಿ ನೀಡಿದ್ದು, ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸುವವರಿಗೆ ಸಂವಾದ- ಬದುಕು ಕ್ಯಾಂಪಸ್‌ನಲ್ಲಿ ಆರು ತಿಂಗಳಿನ ಸರ್ಟಿಫಿಕೇಟ್ ಕೋರ್ಸ್‌ನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ಈ ಕೋರ್ಸ್ ಗೆ ಅರ್ಜಿ ಸಲ್ಲಿಸಲು ತಾವು ಈ ಕೆಳಗಿನ ಗೂಗಲ್ ಲಿಂಕ್‌ನ್ನು ಬಳಸಿ. https://forms.gle/4MJRBrUUQmJ9wyAA9 ನಲ್ಲಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನೂ ಸಂವಾದ ಸಂಸ್ಥೆ ಕುರಿತು ಮತ್ತು ಬದುಕು ಕಾರ್ಯಕ್ರಮಗಳ ಬಗ್ಗೆ ತಿಳಿಯಲು www.samvadabaduku.org ವೆಬ್ ಸೈಟ್ ಗೆ ಭೇಟಿ ಮಾಡುವಂತೆ ತಿಳಿಸಿದ್ದಾರೆ.
ಆರು ತಿಂಗಳ ಡೆವಲಪ್ ಮೆಂಟ್ ಪ್ರೊಫೆಷನಲ್ ಸರ್ಟಿಫಿಕೇಟ್ ಕೋರ್ಸ್ ತರಬೇತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5/03/2025 ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7337835677 & 9880194185 ಗೆ ಸಂಪರ್ಕಿಸುವುದು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯೊಳಗಡೆ ಕರೆ ಮಾಡುವಂತೆ ಸೂಚಿಸಿದ್ದಾರೆ.
BREAKING NEWS: ಕಬ್ಬಡಿ ಆಡಲು ಹೋಗಿ ಆಯತಪ್ಪಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ಕಾಲಿಗೆ ಪೆಟ್ಟು
BREAKING: ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕರ ಮೇಲೆ ಆಟೋ ಚಾಲಕನಿಂದ ಹಲ್ಲೆ: ಕುಸಿದು ಬಿದ್ದು ಸಾವು