ಹೈದರಾಬಾದ್ : ಬಿಯರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಹೊರಬಿದ್ದಿದ್ದು, ಕಿಂಗ್ ಫಿಶರ್ ಬಿಯರ್ ನಲ್ಲಿ ಇದೀಗ ಶಿಲೀಂಧ್ರ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ತೆಲಂಗಾಣದಲ್ಲಿ ಸರ್ಕಾರ ಮದ್ಯದ ಬೆಲೆಯನ್ನು ಹೆಚ್ಚಿಸಿದೆ. ಮದ್ಯ ಪ್ರಿಯರು ಈಗಾಗಲೇ ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಯರ್ ಪೂರೈಕೆ ಸರಪಳಿಗಳಿಗೆ ಕಮಿಷನ್ ಹೆಚ್ಚಿಸುವಂತೆ ವಿತರಕರು ಒತ್ತಾಯಿಸಿದ ನಂತರ ರೇವಂತ್ ಸರ್ಕಾರ್ ಬೆಲೆಗಳನ್ನು ಶೇಕಡಾ 15 ರಷ್ಟು ಹೆಚ್ಚಿಸಿದರು. ಇದರೊಂದಿಗೆ ಕಿಂಗ್‌ಫಿಷರ್ ಲೈಟ್ ಬಿಯರ್‌ಗಳ ಬೆಲೆ 150 ರೂ.ಗಳಿಂದ 172 ರೂ.ಗಳಿಗೆ ಏರಿಕೆಯಾಗಿದೆ. ಕಂಪನಿ, ಹಗುರ ಮತ್ತು ಬಲವಾದ ಬಿಯರ್ ಅನ್ನು ಅವಲಂಬಿಸಿ ಬೆಲೆಗಳಲ್ಲಿ ವ್ಯತ್ಯಾಸಗಳಿವೆ.
జనగామ జిల్లా దేవరుప్పులలో ఫంగస్ పట్టిన బీరు సరఫరా
ధరలు పెంచి, కల్తీ బీర్లు సరఫరా చేస్తున్నారని మద్యం ప్రియుల ఆందోళన pic.twitter.com/yJI7FGltp3
— Telugu Scribe (@TeluguScribe) February 15, 2025
ಇತ್ತೀಚೆಗೆ ಜನಗಮ ಜಿಲ್ಲೆಯ ದೇವರಪ್ಪುವಿನಲ್ಲಿ ಕಿಂಗ್‌ಫಿಷರ್ ಬಿಯರ್ ಸೇವಿಸಿದ ವ್ಯಕ್ತಿಯೊಬ್ಬರು ಅದರಲ್ಲಿ ಶಿಲೀಂಧ್ರವನ್ನು ಪತ್ತೆ ಮಾಡಿದರು. ಬೆಲೆ ಏರಿಕೆ ಮಾಡಿ ಕಲಬೆರಕೆ ಬಿಯರ್ ಪೂರೈಸಲಾಗುತ್ತಿದೆ ಎಂದು ಮದ್ಯ ಪ್ರಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದೆ.