ಚಿಕ್ಕಮಗಳೂರು: ಜಿಲ್ಲೆಯ ಗೌರಿಗದ್ಧೆ ಗ್ರಾಮದಲ್ಲಿರುವಂತ ಗೋಶಾಲೆಯಲ್ಲಿ ಭೀಕರ ಬೆಂಕಿ ಅವಘಡ ಉಂಟಾಗಿದೆ. ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಗೋವುಗಳಿಗೆ ಸಂಗ್ರಹಿಸಿದ್ದಂತ ಮೇವು ಧಗಧಗಿಸಿ ಹೊತ್ತಿ ಉರಿಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ಧೆ ಗ್ರಾಮದಲ್ಲಿನ ಗೋಶಾಲೆಯಲ್ಲಿ ಭೀಕರ ಅಗ್ನಿ ಅವಘಡ ಉಂಟಾಗಿದೆ. ಗೋವಿಗೆ ಹಾಕಲು ಸಂಗ್ರಹಿಸಿದ್ದಂತ ಮೇವಿಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದೆ. ಗೋ ಶಾಲೆಗೂ ಬೆಂಕಿ ತಗುಲಿದ್ದು, ಗೋವುಗಳನ್ನು ರಕ್ಷಿಸಲಾಗಿದೆ.
ಇನ್ನೂ ಸ್ಥಳಕ್ಕೆ ಆಗಮಿಸಿರುವಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 12 ಲಕ್ಷ ಮೌಲ್ಯದ ಮೇವು ಸುಟ್ಟು ಭಸ್ಮವಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
KNN Special Story: ಭಾರತದ ಮೊದಲ ‘ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಉದ್ಘಾಟನೆಗೆ ಸಿದ್ಧ: ಹೀಗಿದೆ ವಿಶೇಷತೆ
BREAKING : `ಕಾಫಿ’ ಪ್ರಿಯರಿಗೆ ಬಿಗ್ ಶಾಕ್ : ಶೀಘ್ರವೇ 5 ರೂ.ಬೆಲೆ ಹೆಚ್ಚಳ | Coffee prices hike