ವಿಜಯನಗರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವಂತ ಶ್ರೀ ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ವರ್ಷದ ಭವಿಷ್ಯ ವಾಣಿಯಾದಂತ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಗೊರವಯ್ಯ ತುಂಬಿದ ಕೊಡ ತುಳುಕೀತಲೇ ಪರಾಕ್ ಎಂಬುದಾಗಿ ಕಾರ್ಣಿಕ ನುಡಿ ನುಡಿದಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಜಾತ್ರೆಯನ್ನು ಇಂದು ನಡೆಸಲಾಯಿತು. ಈ ಬಾರಿ ರಾಮಣ್ಣ ಗೊರವಯ್ಯ ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ. ತುಂಬೀದ ಕೊಡ ತುಳುಕೀತಲೇ ಪರಾಕ್ ಅಂತ ಕಾರ್ಣಿಕ ನುಡಿದಿದ್ದಾರೆ.
ಇದನ್ನು ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದ್ದು, ರಾಜ್ಯ, ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂಬುದಾಗಿ ಅರ್ಥವಾಗಿದೆ ಎಂದಿದ್ದಾರೆ. ಒಟ್ಟಾರೆ ಈ ಭಾರಿ ರಾಜ್ಯ, ದೇಶದಲ್ಲಿ ತುಂಬಿದ ಕೊಡ ತುಳುಕೀತಲೇ ಪರಾಕ್ ಎನ್ನುವಂತೆ ಉತ್ತಮ ಮಳೆ ಬೆಳೆಯಾಗಲಿದೆ ಎಂಬುದಾಗಿ ಶ್ರೀ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ.
‘ಇನ್ವೆಸ್ಟ್ ಕರ್ನಾಟಕ 2025’ರ ಸಮಾವೇಶದಿಂದ ರಾಜ್ಯದಲ್ಲಿ 10.27 ಲಕ್ಷ ಕೋಟಿ ಬಂಡವಾಳ ಹೂಡಿಕೆ: ಡಿಕೆಶಿ
KNN Special Story: ಭಾರತದ ಮೊದಲ ‘ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಉದ್ಘಾಟನೆಗೆ ಸಿದ್ಧ: ಹೀಗಿದೆ ವಿಶೇಷತೆ