ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಸಿರುಗುಪ್ಪ ಮತ್ತು ಸಂಡೂರು ಘಟಕಗಳಲ್ಲಿ ವಿವಿಧ ತಾಂತ್ರಿಕ ವೃತ್ತಿಗಳಿಗೆ ಶಿಶಿಕ್ಷÄ ತರಬೇತಿ ನೀಡಲು ಅರ್ಹ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು www.apprenticeship.gov.in / www.ncvtmis.com ವೆಬ್‌ಸೈಟ್ ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊAಡು ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ನಗರದ ಸಿರುಗುಪ್ಪ ರಸ್ತೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಗೆ ಮಾ.05 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಶಿಶಿಕ್ಷÄ ವೃತ್ತಿ ಸಂಖ್ಯೆ
ಆಟೋ ಎಲೆಕ್ಟಿçಷಿಯನ್-02, ಡಿಸೇಲ್ ಮೆಕಾನಿಕ್-16, ಮೋಟರ್ ಮೆಕ್ಯಾನಿಕ್ ವೆಹಿಕಲ್-02.
ಬೇಕಾದ ದಾಖಲೆಗಳು:
ಆಧಾರ್ ಕಾರ್ಡ್, ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಟಿಐ ಮೂಲ ಅಂಕಪಟ್ಟಿ, ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ನಕಲು, ಇತ್ತೀಚಿನ ಮೂರು ಭಾವಚಿತ್ರ, ಆನ್‌ಲೈನ್ ನೋಂದಣಿ ವಿವರದ ಪ್ರತಿ ಒದಗಿಸಬೇಕು.
ಸೂಚನೆ:
ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳು ಸಂದರ್ಶನ ಹಾಜರಾಗಲು ಅರ್ಹರಾಗಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಗರದ ಸಿರುಗುಪ್ಪ ರಸ್ತೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಗೆ ಭೇಟಿ ನೀಡಬಹುದು ಎಂದು ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆದೇಶ ಜಾರಿ: ಸಿಎಸ್ ಶಾಲಿನಿ ರಜನೀಶ್
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಿತ್ತು ಅಂಕುಶ: ಹೀಗಿದೆ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯ ಹೈಲೈಟ್ಸ್