ಮೈಸೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆಯ ನಂತ್ರ, ಹುಣಸೂರು ನಗರದಲ್ಲಿರುವಂತ ಪ್ರತಿಷ್ಠಿತ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಜೆಟ್ ವಿಶ್ಲೇಷಣೆ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಳೆದ ಸೋಮವಾರದಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವಂತ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಜೆಟ್ ವಿಶ್ಲೇಷಣೆ ಕಾರ್ಯಗಾರವನ್ನ ಕಲಾ ವಿಭಾಗದ ವತಿಯಿಂದ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾದ ಜಗದೀಶ್ ಬಿ.ಆರ್ ಅವರು ಬಜೆಟ್ ವಿಶ್ಲೇಷಣೆಯ ಕುರಿತು ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಭಗಿನಿ ಆರೋಕ್ಯ ಮೇರಿ ಅವರು ಮಾತನಾಡಿ ಪದವಿ ಕಾಲೇಜುಗಳು ಕೇವಲ ಉಪನ್ಯಾಸಕ್ಕೆ ಮಾತ್ರ ಸೀಮಿತವಾಗಿರದೇ ಪಠ್ಯೇತರ ಚಟುವಟಿಕೆಗಳನ್ನು ಪದವಿ ಮಟ್ಟದಲ್ಲಿ ಆಯೋಜನೆಯನ್ನು ಮಾಡಬೇಕು. ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಒಳಗೊಂಡಂತೆ ಸಾಮಾನ್ಯ ಜ್ಞಾನದ ವಿಚಾರಗಳನ್ನ ಅವರಲ್ಲಿ ತುಂಬಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಲಾ ವಿಭಾಗದ ಮುಖ್ಯಸ್ಥರಾದಂತಹ ಲೋಕೇಶ್.ಬಿ ಮಾತನಾಡಿ ಬಜೆಟ್ ಒಂದು ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಸಹಾಯಕವಾಗುವಂತಹ ಸಾಧನವಾಗಿದೆ. ಜನರಿಂದ ಪಡೆಯುವಂತ ತೆರಿಗೆಯನ್ನು ಎಷ್ಟರಮಟ್ಟಿಗೆ ಯಾವ ವಿಭಾಗಕ್ಕೆ ಉಪಯೋಗವನ್ನು ಮಾಡಬೇಕು. ಪ್ರಜೆಗಳ ಕಲ್ಯಾಣಕ್ಕೆ ಎಷ್ಟರಮಟ್ಟಿಗೆ ಅದರ ಉಪಯೋಗ ಆಗಿದೆ ಎಂಬ ವಿಚಾರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ತಿಳಿಯಬೇಕಿದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳನ್ನ ಆಧರಿಸಿ ಮಾಹಿತಿ ಮತ್ತು ಬೋಧನೆಯನ್ನು ನೀಡಬೇಕು ಎಂದು ತಿಳಿಸಿದರು.
ಈ ಬಜೆಟ್ ವಿಶ್ಲೇಷಣೆ ಕಾರ್ಯಾಗಾರದಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕ ಮಾದೇಶ್, ಅಭಿಲಾಶ್, ರಾಜ್ಯಶಾಸ್ತ್ರ ಪ್ರಾಧ್ಯಾಪಕ ನಂಜುಂಡಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರಿನಿಂದ ಲಕ್ನೋಗೆ ಏಕಮಾರ್ಗ ವಿಶೇಷ ರೈಲು ಸಂಚಾರ ಆರಂಭ
ರಾಜ್ಯದ `SSLC’ ವಿದ್ಯಾರ್ಥಿಗಳೇ ಗಮನಿಸಿ : `ಪೂರ್ವ ಸಿದ್ಧತಾ ಪರೀಕ್ಷೆ’ಯ ಸಮಯ ಬದಲಾವಣೆ.!