ಬೆಂಗಳೂರು: ಜಿಲ್ಲೆಯ ಆನೇಕಲ್ ನಲ್ಲಿ ಮರ್ಯಾದಾ ಹತ್ಯೆಯ ಘಟನೆಯೊಂದು ನಡೆದಿದೆ. ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಂತ ಯುವತಿಯನ್ನು ಕೆರೆಗೆ ತಳ್ಳಿ ತಂದೆಯೇ ಹತ್ಯೆ ಮಾಡಿರುವಂತ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ಸಹನಾ ಎಂಬ ಯುವತಿಯನ್ನು ಕೆರೆಗೆ ತಳ್ಳಿ ತಂದೆ ರಾಮಮೂರ್ತಿ ಎಂಬುವರು ಮರ್ಯಾದಾ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.
ಸಹನಾ ಹಾಗೂ ನಿತಿನ್ ಕಳೆದ ಒಂದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ದಿನಗಳ ಹಿಂದೆ ಯುವತಿಯ ಪೋಷಕರಿಗೆ ಇವರಿಬ್ಬರ ಪ್ರೀತಿಯ ವಿಚಾರ ತಿಳಿದಿತ್ತು. ಈ ಸಂಬಂಧ ಮಾತುಕತೆ ನಡೆಸಲು ಸಹನಾ ತಂದೆ ರಾಮಮೂರ್ತಿ ನಿತಿನ್ ಗೆ ಕರೆ ಮಾಡಿ ಬರುವಂತೆ ಸೂಚಿಸಿದ್ದರು.
ನಿತಿನ್ ಅವರು ರಾಮಮೂರ್ತಿ ಸೂಚನೆಯ ಮೇರೆಗೆ ತಾಯಿಯೊಂದಿಗೆ ನ್ಯಾಯ ಪಂಚಾಯ್ತಿಗೆ ತೆರಳಿದ್ದರು. ಈ ವೇಳೆಯಲ್ಲಿ ನಿತಿನ್ ಜೊತೆಗೆ ಸಹನಾ ಮದುವೆಗೆ ಬಿಲ್ ಖುಲ್ ಒಪ್ಪಿರಲಿಲ್ಲ. ಅಲ್ಲದೇ ನ್ಯಾಯ ಪಂಚಾಯ್ತಿ ವೇಳೆಯಲ್ಲೇ ಸಹನಾ ಮೇಲೆ ಅವರ ತಂದೆ ರಾಮಮೂರ್ತಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಇನ್ನೂ ನ್ಯಾಯ ಪಂಚಾಯ್ತಿಯ ನಂತ್ರ ಮನೆಗೆ ಸಹನಾ ಕರೆದೊಯ್ಯುತ್ತಿದ್ದಂತ ವೇಳೆಯಲ್ಲಿ ಕೆರೆಗೆ ತಳ್ಳಿ ತಂದೆ ರಾಮಮೂರ್ತಿಯೇ ಮರ್ಯಾದಾ ಹತ್ಯೆ ಮಾಡಿರುವುದಾಗಿ ಪ್ರಿಯಕರ ನಿತನ್ ಆರೋಪಿಸಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಧಾನಸೌಧದ ಮುಂದೆ ‘ಆತ್ಮಹತ್ಯೆ ಭಾಗ್ಯ’ ಖಂಡಿಸಿ ವಿಪಕ್ಷ ನಾಯಕರಿಂದ ಪ್ರತಿಭಟನೆ
BREAKING : ‘ಮುಡಾ’ ಅಕ್ರಮ ಹಗರಣ : ಲೋಕಾಯುಕ್ತ ಎಸ್.ಪಿ ಇಂದ ಐಜಿಪಿಗೆ ಅಂತಿಮ ತನಿಖಾ ವರದಿ ಸಲ್ಲಿಕೆ