ಬೆಂಗಳೂರು: ನಗರದಲ್ಲಿ ಭಾವ – ಭಾಮೈದನ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವಂತ ಘಟನೆ ನಡೆದಿದೆ. ಮೆಜೆಸ್ಟಿಕ್ ಸಮೀಪದ ರೈಲ್ವೆ ನಿಲ್ದಾಣ ಬಳಿಯಲ್ಲಿ ಈ ಘಟನೆ ಭಾನುವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಜೆಸ್ಟಿಕ್ ಬಳಿಯ ರೈಲ್ವೆ ನಿಲ್ದಾಣದ ಬಳಿಯಲ್ಲಿ ರೋಲ್ಡ್ ಗೋಲ್ಡ್ ಜೈನ್ ಗಳನ್ನು ಭಾವ ರಾಮ ಹಾಗೂ ಭಾಮೈದ ವೆಂಕಟೇಶ್ ಮಾರಾಟ ಮಾಡುತ್ತಿದ್ದರು. ಇಬ್ಬರ ನಡುವೆ ಜಗಳ ಉಂಟಾಗಿ ಭಾವ ರಾಮ, ತನ್ನ ಭಾಮೈದನಿಗೆ ಚಾಕುವಿನಿಂದ ಇರಿದಿದ್ದನು.
ಚಾಕು ಇರಿತಕ್ಕೆ ಒಳಗಾಗಿದ್ದಂತ ಭಾಮೈದ ವೆಂಕಟೇಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ತಮಿಳುನಾಡಿನ ಸೇಲಂ ಮೂಲದವರಾಗಿದ್ದಾರೆ. ಭಾಮೈದ ವೆಂಕಟೇಶ್ ಸಾವಿನ ಬಳಿಕ ಭಾವ ರಾಮು ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.