ಬೆಂಗಳೂರು: ಮುಗಳೊಳ್ಳಿ-ಜಡ್ರಾಮಕುಂಟಿ-ಆಲಮಟ್ಟಿ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಕೈಗೊಂಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ:
ರೈಲು ಸಂಚಾರ ರದ್ದು: ಫೆ 17 ರಿಂದ 25 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಸೋಲಾಪುರ ಡೈಲಿ ಪ್ಯಾಸೆಂಜರ್ (56906), ಫೆ 18 ರಿಂದ 26 ರವರೆಗೆ ಸೋಲಾಪುರ-ಧಾರವಾಡ ಡೈಲಿ ಪ್ಯಾಸೆಂಜರ್ ಸ್ಪೆಷಲ್, ಫೆ 25 ರಂದು ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್ ಪ್ರೆಸ್ (11415) ಮತ್ತು ಫೆ 26 ರಂದು ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್ ಪ್ರೆಸ್ (11416) ರೈಲುಗಳ ಪ್ರಯಾಣವನ್ನೂ ತಾತ್ಕಾಲಿಕವಾಗಿ ರದ್ದು ರದ್ದುಗೊಳಿಸಲಾಗಿದೆ.
ರೈಲುಗಳ ಸಂಚಾರ ಭಾಗಶಃ ರದ್ದು: ಫೆ 16 ರಿಂದ 24 ರವರೆಗೆ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಗದಗ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ವಿಜಯಪುರ ನಿಲ್ದಾಣದ ಬದಲಾಗಿ ಗದಗದಲ್ಲಿ ಕೊನೆಗೊಳ್ಳಲಿದೆ. ಫೆ 17 ರಿಂದ 25 ರವರೆಗೆ ರೈಲು ಸಂಖ್ಯೆ 06546 ವಿಜಯಪುರ-ಯಶವಂತಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ವಿಜಯಪುರದ ಬದಲಿಗೆ ಗದಗ ನಿಲ್ದಾಣದಿಂದ ಹೊರಡಲಿದೆ, ವಿಜಯಪುರ-ಗದಗ ನಿಲ್ದಾಣಗಳ ನಡುವಿನ ಪ್ರಯಾಣ ಭಾಗಶಃ ರದ್ದುಗೊಂಡಿದೆ.
ಫೆ 16 ರಿಂದ 24 ರವರೆಗೆ ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ರೈಲು ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಇದು ವಿಜಯಪುರದಲ್ಲಿ ಕೊನೆಗೊಳ್ಳುತ್ತದೆ. ಫೆ17 ರಿಂದ 25ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸ್ ಪ್ರೆಸ್ ರೈಲು ಬಾಗಲಕೋಟೆ ನಿಲ್ದಾಣದ ಬದಲು ವಿಜಯಪುರದಿಂದ ಹೊರಡಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.
ಫೆ 16 ರಿಂದ 24 ರವರೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬಾಗಲಕೋಟೆಯಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಫೆ 17 ರಿಂದ 25 ರವರೆಗೆ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.
ಫೆ 17 ರಿಂದ 25 ರವರೆಗೆ ರೈಲು ಸಂಖ್ಯೆ 06919 ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳುತ್ತದೆ ಮತ್ತು ರೈಲು ಸಂಖ್ಯೆ 06920 ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ವಿಜಯಪುರದ ಬದಲು ಬಾಗಲಕೋಟೆಯಿಂದ ಪ್ರಾರಂಭವಾಗಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
ರೈಲು ತಡವಾಗಿ ಪ್ರಾರಂಭ: ಫೆ 25 ರಂದು ರೈಲು ಸಂಖ್ಯೆ 11140 ಹೊಸಪೇಟೆ-ಸಿಎಸ್ಎಂಟಿ ಮುಂಬೈ ಎಕ್ಸ್‌ಪ್ರೆಸ್ ರೈಲು ಹೊಸಪೇಟೆ ನಿಲ್ದಾಣದಿಂದ 2 ಗಂಟೆ ತಡವಾಗಿ ಪ್ರಾರಂಭವಾಗಲಿದೆ.
ರೈಲು ಮಾರ್ಗ ಮಧ್ಯ ನಿಯಂತ್ರಣ: ಫೆ 25 ರಂದು ಪಂಢರಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ16536 ಪಂಢರಪುರ-ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
ನಿಲುಗಡೆ ರದ್ದು: ಈ ಕೆಳಗಿನ ರೈಲುಗಳು ಆಲಮಟ್ಟಿ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವುದಿಲ್ಲ.
1. ರೈಲು ಸಂಖ್ಯೆ 16587 ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ (JCO 21.02.2025 & 23.02.2025).
2. ರೈಲು ಸಂಖ್ಯೆ 17319 ಎಸ್ಎಸ್ಎಸ್ ಹುಬ್ಬಳ್ಳಿ-ಹೈದರಾಬಾದ್ ಡೈಲಿ ಎಕ್ಸ್‌ಪ್ರೆಸ್ (JCO 20.02.2025 ರಿಂದ 24.02.2025).
3. ರೈಲು ಸಂಖ್ಯೆ 17320 ಹೈದರಾಬಾದ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (JCO 20.02.2025 ರಿಂದ 24.02.2025).
4. ರೈಲು ಸಂಖ್ಯೆ 16588 ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ (JCO 18.02.2025, 23.02.2025).
5. ರೈಲು ಸಂಖ್ಯೆ 17324 ಬನಾರಸ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (JCO 23.02.2025).
6. ರೈಲು ಸಂಖ್ಯೆ 11416 ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್‌ಪ್ರೆಸ್ (JCO 21.02.2025 ರಿಂದ 25.02.2025).
7. ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲ್ ಗುಂಬಜ್ ಡೈಲಿ ಎಕ್ಸ್‌ಪ್ರೆಸ್ (JCO 21.02.2025 ರಿಂದ 25.02.2025).
8. ರೈಲು ಸಂಖ್ಯೆ 07330 ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ (JCO 21.02.2025 ರಿಂದ 25.02.2025).
9. ರೈಲು ಸಂಖ್ಯೆ 11139 ಸಿಎಸ್ಎಂಟಿ ಮುಂಬೈ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ (JCO 20.02.2025 ರಿಂದ 24.02.2025).
10. ರೈಲು ಸಂಖ್ಯೆ 56905 ಸೋಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ (JCO 21.02.2025 ರಿಂದ 25.02.2025).
11. ರೈಲು ಸಂಖ್ಯೆ 11415 ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ (JCO 21.02.2025 ರಿಂದ 24.02.2025).
12. ರೈಲು ಸಂಖ್ಯೆ 11140 ಹೊಸಪೇಟೆ-ಸಿಎಸ್ಎಂಟಿ ಮುಂಬೈ ಎಕ್ಸ್‌ಪ್ರೆಸ್ (JCO 21.02.2025 ರಿಂದ 25.02.2025).
13. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ ಗುಂಬಜ್ ಡೈಲಿ ಎಕ್ಸ್‌ಪ್ರೆಸ್ (JCO 21.02.2025 ರಿಂದ 25.02.2025).
14. ರೈಲು ಸಂಖ್ಯೆ 07329 ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ (JCO 21.02.2025 ರಿಂದ 25.02.2025).
15. ರೈಲು ಸಂಖ್ಯೆ 17323 ಎಸ್ಎಸ್ಎಸ್ ಹುಬ್ಬಳ್ಳಿ-ಬನಾರಸ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (JCO 21.02.2025).
16. ರೈಲು ಸಂಖ್ಯೆ 16217 ಮೈಸೂರು-ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (JCO 24.02.2025).
17. ರೈಲು ಸಂಖ್ಯೆ 07322 ಧಾರವಾಡ-ಸೋಲಾಪುರ ಡೈಲಿ ಪ್ಯಾಸೆಂಜರ್ ವಿಶೇಷ (JCO 21.02.2025 ರಿಂದ 25.02.2025).
ಈ ಕೆಳಗಿನ ರೈಲುಗಳು ಜಡ್ರಾಮಕುಂಟಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ:
1. ರೈಲು ಸಂಖ್ಯೆ 11416 ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್ ಪ್ರೆಸ್ (JCO 19.02.2025 ರಿಂದ 25.02.2025).
2. ರೈಲು ಸಂಖ್ಯೆ 56905 ಸೋಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ (JCO 19.02.2025 ರಿಂದ 25.02.2025).
3. ರೈಲು ಸಂಖ್ಯೆ 11415 ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್ ಪ್ರೆಸ್ (JCO 19.02.2025 ರಿಂದ 24.02.2025).
4. ರೈಲು ಸಂಖ್ಯೆ 07322 ಧಾರವಾಡ-ಸೋಲಾಪುರ ಡೈಲಿ ಪ್ಯಾಸೆಂಜರ್ ಸ್ಪೆಷಲ್ (JCO 19.02.2025 ರಿಂದ 25.02.2025).
BREAKING: ರಾಜ್ಯ ಸರ್ಕಾರದಿಂದ ‘ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು’ ರಾಜ್ಯಪಾಲರಿಗೆ ಮರು ರವಾನೆ.!
Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು