ಶಿವಮೊಗ್ಗ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮೆಸ್ಕಾಂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಟಿಸಿ ಸಮಸ್ಯೆ ನಿವಾರಿಸಿ ರೈತರಿಗೆ ಸಕಾಲದಲ್ಲಿ ಟಿಸಿ ಸರಬರಾಜು ಮಾಡುವಂತೆ ಖಡಕ್ ಸೂಚನೆ ನೀಡಿದರು.
ಇಂದು ಸಾಗರ ಶಾಸಕ ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಸಭೆಯ ಪ್ರಮುಖ ಹೈಲೈಟ್ಸ್
* ಹೊಸನಗರ ತಾಲ್ಲೂಕು ಈ ಹಿಂದೆ 20 ಎಂ.ವಿ.ಎ ಇತ್ತು ಅದು ಸುಟ್ಟುಹೋಗಿರುವುದರಿಂದ, ತುರ್ತಾಗಿ 10 ಎಂ.ವಿ.ಎ ಹಾಕಿದ್ದೀರಿ ಆದರೆ 20 ಎಂ.ವಿ.ಎ ಬೇಕಾಗಿದ್ದು ಇದರಿಂದ ಈಗ ಸಮರ್ಪಕವಾಗಿ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ ಕೂಡಲೇ 20 ಎಂ.ವಿ.ಎ ಅಳವಡಿಸಲು ಕ್ರಮ ವಹಿಸುವುದು.
* 25 ಕೆ.ವಿ ಯ ಟಿ.ಸಿಗಳನ್ನು 63 ಕೆ.ವಿ ಗಳನ್ನಾಗಿ ಉನ್ನತೀಕರಿಸುವ ಬಗ್ಗೆ. ಬೇಡಿಕೆಗೆ ತಕ್ಕಂತೆ ರಿಪೇರಿ ಆಗದೇ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡರು.
* ಟಿ.ಸಿ ಗಳ ಕೊರತೆ ಇರುವುದರಿಂದ ರೈತರಿಗೆ ತುಂಬಾ ತೊಂದರೆ ಉಂಟಾಗಿದೆ ಹಾಗಾಗಿ ಬೆರೆಕಡೆಯಿಂದ ತರಿಸಿ ಕೊಡುವ ಬಗ್ಗೆ ಸೂಚಿಸಿದರು.
* ಜೋಗ್ ಉಪ ವಿಭಾಗದ ಬ್ಯಾಕೋಡು ಶಾಖೆಯ ಮಿಂಚ-ಸುಳುಮನೆ, ಪಡಬೀಡು, ಕಲ್ಲೋಡು ಗ್ರಾಮಗಳಿಗೆ ಹೆಚ್ಚುವರಿ ಟಿ.ಸಿ ವರ್ಕ್ ಆರ್ಡರ್ ನೀಡುವ ಕುರಿತಂತೆ ಕ್ರಮವಹಿಸಲು ಹೇಳಿದರು.
* ನಾಗವಳ್ಳಿ ಭಾಗದಲ್ಲಿ ಭಟ್ಕಳದಿಂದ ಸರಿಯಾಗಿ ವಿದ್ಯುತ್ ಸಮರ್ಪಕವಾಗಿ ನೀಡದಿರುವ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಿ ಕ್ರಮವಹಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಎಂ.ಡಿ ಶ್ರೀ ಜಯದೇವ, ಮುಖ್ಯ ಇಂಜಿನಿಯರ್ ಬಸಪ್ಪ , ಮೆಸ್ಕಾಂ ಎಸ್.ಇ ಜಯದೇವಪ್ಪ, ಕೆಪಿಟಿಸಿಎಲ್ ಇ.ಇ ಜಫ್ರುಲ್ಲ ಬೇಗಂ, ಮೆಸ್ಕಾಂ ಇಂಜಿನಿಯರ್ ಚಂದ್ರಶೇಖರ್ ಸೇರಿದಂತೆ ಅನೇಕ ಮೆಸ್ಕಾಂ ಅಧಿಕಾರಿಗಳು ಹಾಜರಿದ್ದರು.
ನಮ್ಮ ಮೆಟ್ರೋ ಪ್ರಯಾಣದರ ಏರಿಕೆ ಹಿಂಪಡೆಯಲು ಶಾಸಕ ರವಿ ಸುಬ್ರಹ್ಮಣ್ಯ ಆಗ್ರಹ
Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು