ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸ್ನಾನ ಮಾಡಿದ ನಂತರ ಅವರು ಪ್ರಾರ್ಥನೆ ಸಲ್ಲಿಸಿದರು.
ಇದಕ್ಕೂ ಮುನ್ನ ಪ್ರಯಾಗ್ ರಾಜ್ ಗೆ ಆಗಮಿಸಿದ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೊದಲು ರಾಷ್ಟ್ರಪತಿ ಮುರ್ಮು ಈ ಸ್ಥಳದಲ್ಲಿ ವಲಸೆ ಹಕ್ಕಿಗಳಿಗೆ ಆಹಾರವನ್ನು ನೀಡಿದರು.
ರಾಷ್ಟ್ರಪತಿ ಭವನದ ಪ್ರಕಾರ, ಪ್ರಯಾಗ್ರಾಜ್ಗೆ ತಮ್ಮ ಒಂದು ದಿನದ ಭೇಟಿಯ ಸಮಯದಲ್ಲಿ, ರಾಷ್ಟ್ರಪತಿಗಳು ಅಕ್ಷಯವತ್ ಮತ್ತು ಹನುಮಾನ್ ಮಂದಿರದಲ್ಲಿ ಪೂಜೆ ಮತ್ತು ದರ್ಶನ ಮಾಡಲಿದ್ದಾರೆ ಮತ್ತು ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ