ಸೋಲಾಪುರ್ ಜಿಲ್ಲೆಯ ಮೊಹೋಲ್ ತಾಲ್ಲೂಕಿನಲ್ಲಿ ಸೋಮವಾರ ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ
ದೇವಾಲಯದ ದರ್ಶನಕ್ಕಾಗಿ ತುಳಜಾಪುರಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಅಪಘಾತಕ್ಕೀಡಾಗಿದ್ದು, ಬಸ್ ಚಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಮೊಹೋಲ್ ತಾಲ್ಲೂಕಿನ ಸೋಲಾಪುರ-ಪುಣೆ ಹೆದ್ದಾರಿಯ ಕೋಲೆವಾಡಿ ಬಳಿ ಈ ಭಯಾನಕ ಘಟನೆ ನಡೆದಿದೆ. ಅಪಘಾತದಲ್ಲಿ ಟ್ರಕ್, ಮಿನಿ ಬಸ್ ಮತ್ತು ದ್ವಿಚಕ್ರ ವಾಹನ ಸೇರಿವೆ.
ಭೀಕರ ಅಪಘಾತ ಹೇಗೆ ಸಂಭವಿಸಿತು?
ಸೋಲಾಪುರ-ಪುಣೆ ಹೆದ್ದಾರಿಯಲ್ಲಿ ಟ್ರಕ್ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ನಂತರ ಟ್ರಕ್ ರಾಂಗ್ ಸೈಡ್ ಗೆ ತಿರುಗಿ ಮಿನಿ ಬಸ್ ಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಮಿನಿ ಬಸ್ ಪಲ್ಟಿಯಾಗಿದೆ. ಬೈಕ್ ಸವಾರ ದಯಾನಂದ ಭೋಸಲೆ, ಮಿನಿ ಬಸ್ ಚಾಲಕ ಲಕ್ಷ್ಮಣ್ ಪವಾರ್ ಹಾಗೂ ಇನ್ನೋರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಲ್ಟಿಯಾದ ಮಿನಿ ಬಸ್ ಅನ್ನು ನಂತರ ಕ್ರೇನ್ ಸಹಾಯದಿಂದ ಹೊರತೆಗೆಯಲಾಯಿತು.
ಘಟನೆಗೆ ಸಂಬಂಧಿಸಿದಂತೆ ಕಂಟೈನರ್ ಟ್ರಕ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ