ಧಾರವಾಡ: ಪೋಕ್ಸೋ ಕೇಸಲ್ಲಿ ಅರೆಸ್ಟ್ ಆಗಿದ್ದಂತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ನೀಡಿತ್ತು. ಜೈಲಿಗೆ ಕರೆದೊಯ್ಯುತ್ತಿದ್ದಂತ ವೇಳೆ ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ ಮನೆ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳೋ ಧಮ್ಕಿ ಹಾಕಿ ಹೈಡ್ರಾಮಾವನ್ನೇ ಮಾಡಿದ್ದನು. ಆದರೇ ಪೊಲೀಸರು ಮಾತ್ರ ಅಷ್ಟೇ ಜಾಣ್ಮೆ ಪ್ರದರ್ಶಿಸಿ ಆತನನ್ನು ಹಿಡಿದಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ.
ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2021ರಲ್ಲಿ ವಿಜಯ್ ಉಣಕಲ್ ಎಂಬಾದ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆ ಬಳಿಕ ಜಾಮೀನು ಪಡೆದು ಹೊರಗಿದ್ದನು. ಆದರೇ ನಿರಂತರವಾಗಿ ಕೋರ್ಟ್ ಗೆ ಹಾಜರಾಗದ ಕಾರಣ ವಿಜಯ್ ಉಣಕಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಲಾಗಿತ್ತು.
ಕೋರ್ಟ್ ಆದೇಶದಿಂದಾಗಿ ವಿಜಯ್ ಉಣಕಲ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯ ಬಳಿಕ ಕೋರ್ಟ್ ವಿಜಯ್ ಉಣಕಲ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಹೀಗಾಗಿ ಆರೋಪಿಯನ್ನು ಜೈಲಿಗೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಕರೆದೊಯ್ಯುತ್ತಿದ್ದಾಗ ಕುಮಾರೇಶ್ವರ ಬಡಾವಣೆಯ ಬಳಿಯಲ್ಲಿ ತಪ್ಪಿಸಿಕೊಂಡು ಕಟ್ಟಡವೊಂದರ ಮೇಲೆ ಏರಿ ಆತ್ಮಹತ್ಯೆ ಧಮ್ಕಿ ಹಾಕಿದ್ದನು.
ಆರೋಪಿ ವಿಜಯ್ ಉಣಕಲ್ ತಾನು ಜಡ್ಜ್ ಬರೋವರೆಗೂ ಕೆಳಗೆ ಇಳಿಯೋದಿಲ್ಲ. ಅವರ ಜೊತೆಗೆ ಮಾತನಾಡಿದಾಗಲೇ ಕೆಳಗೆ ಇಳಿಯುತ್ತೇನೆ. ಇಲ್ಲದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೈಡ್ರಮಾವನ್ನೇ ಮಾಡಿದ್ದನು. ಈ ಹಿನ್ನಲೆಯಲ್ಲಿ ಪೊಲೀಸರು ಮಸ್ತ್ ಪ್ಲಾನ್ ಮಾಡಿದ್ದರು.
ಪೊಲೀಸರಿಂದ ತಪ್ಪಿಸಿಕೊಂಡು ಆತ್ಮಹತ್ಯೆ ಧಮ್ಕಿ ಹಾಕಿದ್ದಂತ ಆರೋಪಿ ವಿಜಯ್ ಉಣಕಲ್ ಬಂಧಿಸೋದಕ್ಕೆ ಅಲ್ಲೇ ಇದ್ದಂತ ಉಪನ್ಯಾಸಕ ಚಿಂತಾಮಣಿ ಎಂಬುವರಿಗೆ ಕೋಟ್ ಹಾಕಿಸಿ, ಇವರೇ ನ್ಯಾಯಾಧೀಶರು ಎಂಬುದಾಗಿ ತೋರಿಸಿ ಮಾತನಾಡಲು ಸೂಚಿಸಿದರು.
ಆರೋಪಿ ವಿಜಯ್ ಉಣಕಲ್ ಅವರು ಜಡ್ಜ್ ಎಂಬುದಾಗಿ ನಂಬಿ ಮಾತನಾಡುತ್ತಿದ್ದಂತ ವೇಳೆಯಲ್ಲಿ ಹಿಂದಿನಿಂದ ತೆರಳಿದಂತ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಆರೋಪಿಯನ್ನು ಮರಳಿ ಹಿಡಿದು ಜಾಣ್ಮೆ ಪ್ರದರ್ಶಿಸಿದ್ದಾರೆ. ಈಗ ಸೆಂಟ್ರಲ್ ಜೈಲಿಗೆ ಆರೋಪಿಯನ್ನು ಧಾರವಾಡ ಉಪನಗರ ಠಾಣೆಯ ಪೊಲೀಸರು ಕರೆದೊಯ್ಯುತ್ತಿದ್ದಾರೆ.
BREAKING: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಡಿಸಿಎಂ ಡಿಕೆಶಿ, ಪತ್ನಿ ಉಷಾ ಪುಣ್ಯಸ್ನಾನ
BREAKING: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ ಸಲ್ಲಿಕೆ | Dehli CM Atishi resigns