ಉತ್ತರ ಪ್ರದೇಶ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಅಂತ ಕುಂಭಮೇಳದಲ್ಲಿ ಪೋಟೋ ಹಿಡಿದು ಪುಣ್ಯಸ್ನಾನ ಮಾಡಿ ಪೂಜೆಯನ್ನು ಅಭಿಮಾನಿಗಳು ಮಾಡಿದಂತ ಘಟನೆ ನಡೆದಿದೆ.
ವಿಜಯಪುರದ ಬಿಜೆಪಿ ನಗರ ಮಂಡಲದ ಉಪಾಧ್ಯಕ್ಷರು ಸೇರಿದಂತೆ ಇತರೆ ಬಿಜೆಪಿ ಕಾರ್ಯಕರ್ತರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ತೆರಳಿದ್ದಾರೆ.
ಮಹಾಕುಂಭಮೇಳದ ಗಂಗಾನದಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪೋಟೋ ಹಿಡಿದು ಪುಣ್ಯಸ್ನಾನ ಮಾಡಿದ್ದಾರೆ. ಅಲ್ಲದೇ ಶಾಸಕ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಅಂತ ಗಂಗಾನದಿಯಲ್ಲಿ ಘೋಷಣೆ ಕೂಗುತ್ತಲೇ ಪೂಜೆ ಸಲ್ಲಿಸಿದ್ದಾರೆ.
ಜೀತ ಪದ್ಧತಿ ಸಂಪೂರ್ಣ ತೊಡೆದು ಹಾಕಲು ಸರ್ಕಾರದ ಜೊತೆ ಸಮಾಜ ಕೈಗೂಡಿಸಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ