ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ CT Scan ಮತ್ತು MRI Scan ಸೇವೆಗಳಿಗೆ ಶುಲ್ಕ ನಿಗಧಿಪಡಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ 2016-17 ನೇ ಸಾಲಿನ ಆಯವ್ಯಯ ಭಾಷಣದ ಖಂಡಿಕೆ-125 ರಲ್ಲಿ ಘೋಷಿಸಿರುವಂತೆ ಉಚಿತ ರೋಗ ಪತ್ತೆ ಮತ್ತು ಸೇವೆಗಳನ್ನು ಅನುಷ್ಠಾನಗೊಳಿಸಲು CT & MRI Scan ಸೇವೆಗಳನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (PPP) ಮಾದರಿಯಲ್ಲಿ ಪಡೆಯಲು ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ 14 ಜಿಲ್ಲಾ ಆಸ್ಪತ್ರೆಗಳಲ್ಲಿ CT Scan ಅನ್ನು PPP ಮಾದರಿಯಲ್ಲಿ ಪ್ರತಿ Scan ಗೆ ರೂ. 1,550/- ದರದಲ್ಲಿ ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ MRI Scan ಅನ್ನು ಪ್ರತಿ Scan ಗೆ ರೂ. 3,000/- ದರದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಆದೇಶಗಳಲ್ಲಿ ಹೊಸದಾಗಿ ರಾಜ್ಯದ 15 ಸಾರ್ವಜನಿಕ ಆಸ್ಪತ್ರೆಗಳಲ್ಲಿ MRI Scan ಸೇವೆಗಳನ್ನು ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ CT Scan ಸೇವೆಗಳನ್ನು ಸರ್ಕಾರದ ಸಹಭಾಗಿತ್ವದಲ್ಲಿ PPP ಮಾದರಿಯಲ್ಲಿ ರೂ. 47.41 ಕೋಟಿ ವೆಚ್ಚದಲ್ಲಿ 7 ವರ್ಷದ ಅವಧಿಗೆ ಟೆಂಡರ್ ಆಹ್ವಾನಿಸಿ ಕ್ರಮ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮುಂದುವರೆದು ದಿ: 23.02.2024 ರ ತಿದ್ದುಪಡಿ ಆದೇಶದಲ್ಲಿ 7 ವರ್ಷದ ಅವಧಿಗೆ ರೂ. 222.28 ಕೋಟಿಗಳ ವೆಚ್ಚದಲ್ಲಿ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (4) ರ ಏಕ ಕಡತದಲ್ಲಿ CT ಮತ್ತು MRI Scan ಸೇವೆಗಳಗೆ ದರ ನಿಗಧಿಪಡಿಸುವ ಸಂಬಂಧವಾಗಿ ನಿರ್ದೇಶಕರು, ಆಕುಕ ಸೇವೆಗಳು ಇವರ ಅಧ್ಯಕ್ಷತೆಯಲ್ಲಿ ದಿ:08.07.2024 ರಂದು ನಡೆದ ಸಮಿತಿಯು NFDC ಮಾರ್ಗಸೂಚಿಗಳನ್ನಯ ಪರಿಶೀಲಿಸಿ CT ಮತ್ತು MRI Scan ಸೇವೆಗಳನ್ನು ಒದಗಿಸುವ ಸಂಬಂಧವಾಗಿ ಕೆಲವೊಂದು ಶಿಫಾರಸ್ಸುಗಳನ್ನು ನೀಡಿದ್ದು ಇದರನ್ವಯ ಆಕುಕ ಇಲಾಖೆಯು ಪಿಪಿಪಿ ಮಾದರಿಯಲ್ಲಿ ಒದಗಿಸುತ್ತಿರುವ CT/MRI ಸೇವೆಗಳಿಗೆ BPL ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ನೀಡಲು ಹಾಗೂ APL ಕಾರ್ಡ್ ಹೊಂದಿರುವ ರೋಗಿಗಳಿಗೆ ಶೇಕಡ 70ರಷ್ಟು ಶುಲ್ಕ ವಿಧಿಸುವ ಕುರಿತಂತೆ ಆದೇಶ ಹೊರಡಿಸುವಂತೆ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರು ಕೋರಿರುತ್ತಾರೆ.
ಪ್ರಸ್ತಾವನೆ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ CT File No. HFW/243/FPR/2024-FW-HEALTH AND FAMILY WELFARE SEC (Computer No. 1474049) 4085841/2025/HFW-FW Scan ಮತ್ತು MRI Scan ಸೇವೆಗಳಿಗೆ PHH ಕಾರ್ಡ್ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಹಾಗೂ ಇತರರಿಗೆ ಶೇಕಡ 70 ರಷ್ಟು ಶುಲ್ಕ ವಿಧಿಸಲು ಆದೇಶಿಸಲಾಗಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ: FD240EXP S/2024 ದಿನಾಂಕ:03.09.2024ರಲ್ಲಿ ನೀಡಿರುವ ಸಹಮತಿಯನ್ನಯ ಹೊರಡಿಸಲಾಗಿದೆ.