ರಾಮನಗರ : ರಾಜ್ಯದಲ್ಲಿ ಮತ್ತೊಂದು ದರೋಡೆ ಕೇಸ್ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರ ವೇಷದಲ್ಲಿ ಕಾರಿನ ಮೇಲೆ ದಾಳಿ ಮಾಡಿ ದರೋಡೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಬೆಂಗಳೂರಿನಿಂದ ಚನ್ನಪಟ್ಟಣ ಕಡೆ ಹೋಗುವ ರಾಮನಗರ ತಾಲೂಕಿನ ದೊಡ್ಡ ಮಣ್ಣುಗುಡ್ಡೆ ಗ್ರಾಮದ ಬಳಿ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನ BWSSB ಉದ್ಯೋಗಿಯಾಗಿದ್ದ ನಾಗೇಶ್ ಎನ್ನುವವರು ಕಾರಿನಲ್ಲಿ ಹೋಗುವಾಗ ಪೊಲೀಸ್ ಸಮವಸ್ತ್ರ ಧರಿಸಿ ದರೋಡೆಕೋರರು ತಡೆದು ಹಲ್ಲೆ ನಡೆಸಿ ದರೋಡೆ ಮಾಡಿರುವ ಘಟನೆ ನಡೆದಿದೆ.
ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದವರ ಕಾರು ಅಡ್ಡಗಟ್ಟಿ, ತಾವು ಪೊಲೀಸ್ ಎಂದು ಸುಳ್ಳು ಹೇಳಿ ನಂತರ ಕಾರಿನ ಡಾಕ್ಯೂಮೆಂಟ್ ಕೊಡಿ ಎಂದು ಕೇಳಿದ್ದಾರೆ.ಆಗ ಅವರು ಕಾರಿನ ಡೋರ್ ತೆಗೆದು ಡಾಕ್ಯೂಮೆಂಟ್ ತೋರಿಸಲು ಮುಂದಾದಾಗ ಹಲ್ಲೆ ನಡೆಸಿ, ದರೋಡೆ ಮಾಡಲಾಗಿದೆ. ಎಂದು ತಿಳಿದು ಬಂದಿದೆ.