ಸರ್ಕಾರದ ಸುತ್ತೋಲೆಯನುಸಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳ ತೆರಿಗೆ, ಬೇಡಿಕೆ, ವಸೂಲಿ ಮತ್ತು ಬಾಕಿ ನಿರ್ವಹಿಸಲು ನಿಗದಿಪಡಿಸಿರುವ ನಮೂನೆ ಕೆ.ಎಂ.ಎಫ್. 24ರ ವಹಿ ಮತ್ತು ಆಸ್ತಿ ಕಣಜ ತಂತ್ರಾಂಶದಲ್ಲಿ ನಿಗದಿತ ಕಾಲಮಿತಿಯೊಳಗೆ ಕಾಲೋಚಿತಗೊಳಿಸಬೇಕಾಗಿರುತ್ತದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳ ತೆರಿಗೆಗೆ ಅಗತ್ಯ ದಾಖಲೆ ಸಲ್ಲಿಸಬೇಕು. ಈ ಕಾರ್ಯವನ್ನು ನಿರ್ವಹಿಸಲು ಆಸ್ತಿಗಳಿಗೆ ಸಂಬಂಧಪಟ್ಟಂತೆ ಅಗತ್ಯ ದಾಖಲಾತಿಗಳಾದ ಖರೀದಿ ಪತ್ರ, ಎನ್.ಎ.ಆದೇಶದ ಪ್ರತಿ, ವಿನ್ಯಾಸ ನಕ್ಷೆ, ಚೆಕ್ಕಬಂದಿ ದಾಖಲಾತಿಗಳು, ವರ್ಗಾವಣೆ ಆದೇಶದ ಪ್ರತಿ, ಕೈ ಬರಹದ ನಮೂನೆ-3ರ ಪ್ರತಿ, ಆಸ್ತಿಯ ಭಾವಚಿತ್ರ, ಆಸ್ತಿ ಮಾಲೀಕರ ಪಾಸ್ ಪೋರ್ಟ ಸೈಜ್ ಭಾವಚಿತ್ರ ಮತ್ತು ಓಟರ್ ಐ.ಡಿ. ಈ ದಾಖಲಾತಿಗಳ ಅವಶ್ಯಕತೆ ಇರುತ್ತದೆ. ಈ ಎಲ್ಲಾ ದಾಖಲಾತಿಗಳನ್ನು ನಗರಸಭೆಯ ಸಂಬಂಧಪಟ್ಟ ವಾರ್ಡಿನ ಕರವಸೂಲಿಗಾರರಿಗೆ ವದಗಿಸಿಕೊಟ್ಟು ಸಹಕರಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.