ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಂಡ್ ಟೀಂ ವಿರುದ್ಧ ಬಿವೈ ವಿಜಯೇಂದ್ರ ಬಣ ಸಿಡಿದೆದ್ದಿದೆ. ಫೆಬ್ರವರಿ 12ರಂದು ಬೆಂಗಳೂರಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯ ಬಳಿಕ ದೆಹಲಿಗೆ ತೆರಳಿ ಪಕ್ಷದಿಂದ ಉಚ್ಚಾಟನೆಗೆ ಆಗ್ರಹಿಸಲಿದೆ ಎನ್ನಲಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಅಂಡ್ ಟೀಂ ದೆಹಲಿಯಲ್ಲಿ ಬೀಡು ಬಿಟ್ಟು ವಾಗ್ದಾಳಿ ಕೂಡ ನಡೆಸುತ್ತಿದೆ. ಇದರಿಂದಾಗಿ ಬಿಜೆಪ ಪಕ್ಷದಲ್ಲಿ ಆತಂರೀಕ ಕಚ್ಚಾಟ ಬೀದಿಗೆ ಬಿದ್ದಂತೆ ಆಗಿದೆ.
ಈ ಹಿನ್ನೆಲೆಯಲ್ಲಿ ಬಿವೈ ವಿಜಯೇಂದ್ರಗೆ ಬೆಂಬಲಿಸಲು ಮತ್ತೊಂದು ಟೀಮ್ ರೆಡಿಯಾಗಿದೆ. ಇದೇ ಫೆಬ್ರವರಿ 12ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿ ಯತ್ನಾಳ್ ನಡೆ ಬಗ್ಗೆ ಚರ್ಚಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಫೆಬ್ರವರಿ 12ರ ಸಭೆಯಲ್ಲಿ 100ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು ಭಾಗಿಯಾಗೋ ಸಾಧ್ಯತೆ ಇದೆ. ಈ ಸಭೆಯಲ್ಲಿ ಯತ್ನಾಳ್ ಅಂಡ್ ಟೀಂ ಬಗ್ಗೆ ಚರ್ಚೆ ನಡೆಸಿ, ದೆಹಲಿಗೆ ತೆರಳಿ ಪಕ್ಷದಿಂದ ಉಚ್ಚಾಟನೆ ಮಾಡಲು ಆಗ್ರಹಿಸೋದಾಗಿ ತಿಳಿದು ಬಂದಿದೆ.