ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ ಪೂರ್ವ ಸಾಲು ಸಾಲು ಸಭೆಯನ್ನು ಇಲಾಖಾ ವಾರು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಅವರು ರಾಜ್ಯ ಬಜೆಟ್ ಅನ್ನು ಮಾರ್ಚ್ 7ರಂದು ಮಂಡಿಸಲಿದ್ದಾರೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಿಎಂ ಸಿದ್ಧರಾಮಯ್ಯ ಅವರು ಫೆಬ್ರವರಿ 6ರಂದು ಬಜೆಟ್ ಸಿದ್ಧತೆಯನ್ನು ಆರಂಭಿಸಲಿದ್ದಾರೆ. ಫೆಬ್ರವರಿ 6, 2025ರಿಂದ ಫೆಬ್ರವರಿ.14, 2025ರವರೆಗೆ ಕರ್ನಾಟಕ ಬಜೆಟ್ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆಸಲಿದ್ದಾರೆ. ಶಕ್ತಿ ಭವನದಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತು ಬಜೆಟ್ ಸಿದ್ಧತಾ ಸಭೆಯನ್ನು ಮಾಡಲಿದ್ದಾರೆ.
ಈ ಹಿನ್ನಲೆಯಲ್ಲಿ ಬಜೆಟ್ ಸಿದ್ಧತಾ ಸಭೆಯ ಬಳಿಕ ಸಿಎಂ ಸಿದ್ಧರಾಮಯ್ಯ ಅವರು ಮಾರ್ಚ್ ಮೊದಲ ವಾರ ರಾಜ್ಯ ಬಜೆಟ್ ಮಂಡನೆ ಮಾಡೋ ನಿರೀಕ್ಷೆಯಿದೆ. ಮಾರ್ಚ್ ಮೊದಲ ವಾರದಲ್ಲಿ ಜಂಟಿ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಮಾರ್ಚ್.3ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನೂ ಮಾರ್ಚ್.7ರಂದು ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸಂಬಂಧ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ದಿನಾಂಕ ಫೈನ್ ಆಗಿ, ಅಧಿಕೃತವಾಗಿ ಘೋಷಣೆಯಾಗಲಿದೆ.
BIG NEWS: ಶಿವಲಿಂಗದ ಮೇಲೆ ಮದ್ಯವನ್ನಿಟ್ಟು ಪುಂಡರ ವಿಕೃತಿ: ಕುಡುಕರ ಅಡ್ಡೆಯಾದ ಮಹಾರಾಜರು ಕಟ್ಟಿಸಿದ ದೇಗುಲ