ಶಿವಮೊಗ್ಗ: ಮೆಸ್ಕಾಂನಿಂದ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಫೆ.6, 2025ರಂದು 110/11 ಕೆವಿ ವಿ.ವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ 11 ಕೆವಿ ಫೀಡರ್ ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಹಿನ್ನಲೆಯಲ್ಲಿ ಈ ಕೆಳಕಂಡ ಸೊರಬ ತಾಲ್ಲೂಕಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಸೊರಬ ತಾಲ್ಲೂಕಿನ ಮೆಸ್ಕಾಂ ಎಇಇ ಮಾಹಿತಿ ನೀಡಿದ್ದು, ದಿನಾಂಕ:06.02.2025 ರಂದು 110/11 ಕೆವಿ ಸೊರಬ ಕೆಳಕಂಡ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಫೀಡರ್‌ಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಅಂತ ತಿಳಿಸಿದ್ದಾರೆ.
ದಿನಾಂಕ:06.02.2025 ರಂದು 110/11 ಕೆವಿ ಸೊರಬ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕವಿಪ್ರನಿನಿ’ ರವರಿಂದ ತ್ರೈಮಾಸಿಕ ನಿರ್ವಹಣಾ ಕಾಮಗಾಲಿಯನ್ನು ನಡೆಸಲು ಉದ್ದೇಶಿಸಿರುವುದರಿಂದ, 110/11 ಕೆವಿ ವಿ.ವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್-21 ಸೊರಬ ಪಟ್ಟಣ ಸೇರಿದಂತೆ ಎಫ್-2 ಸಾರೇಕೊಪ್ಪ, ಎಫ್-3 ಬಳ್ಳಬೈಲು, ಎಫ್-4 ಓಟೂರು, ಎಫ್-5 ಚಿಕ್ಕಾವಲಿ, ಎಫ್15 ಕಲ್ಲಂಬಿ ಕರೆಂಟ್ ಇರೋದಿಲ್ಲ.
ಎಫ್-16 ಕಡಸೂರು ಎನ್‌ಜೆವೈ, ಎಫ್-17 ಯಲವಳ್ಳಿ ಎನ್‌ಜೆವೈ, ಎಫ್-8 ಹಾಲಗಳಲೆ, ಎಫ್-7 ತಳೇಬೈಲು, ಎಫ್-8 ಕುಪ್ಪೆ, ಎಫ್-9 ಚಿಳಾಲ, ಎಫ್-10 ಪುರ, ಎಫ್-11 ಮಂಚಿ, ಎಫ್-2 ಉರಗನಹಳ್ಳಿ, ಎಫ್-13 ಅಂಡಿಗೆ, ಎಫ್-14 ಕೊಡಕಣಿ, ಎಫ್-20 ಹೆಗ್ಗೋಡು, ಎಫ್-23 ತಾವರೆಹಳ್ಳಿ, ಎಫ್-24 ಕಕ್ಕರಸಿ, ಎಫ್25 ನಡಹಳ್ಳಿ ಮತ್ತು ಎಫ್26 ಸೊರಬ ಇಂಡಸ್ಟ್ರೀಯಲ್ ಫೀಡರ್‌ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ