ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿವಮೊಗ್ಗ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ/ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2025-26 ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶೇ.75 ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿಗಳಿಗೆ ಮತ್ತು ಶೇ.25 ರಷ್ಟು ಇತರೆ ಹಿಂದುಳಿದ ವರ್ಗದ ಸಮುದಾಯಗಳ ಅಭ್ಯರ್ಥಿಗಳು ಸೇವಾಸಿಂಧು ಆನ್ಲೈನ್ ಪೋರ್ಟಲ್ https://sevsindhuservices.karnataka.gov.in ನಲ್ಲಿ ಅಥವಾ ಹತ್ತಿರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು, ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರಗಳು ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.
ಮಾ.10 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಅಭ್ಯರ್ಥಿಯು ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಿಂದ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು/ಉತ್ತಿರ್ಣರಾಗಿರಬೇಕು. ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಅಂಕಪಟ್ಟಿಯನ್ನು ಹೊಂದಿರಬೇಕು. ರಾಜ್ಯದ ಖಾಯಂ ನಿವಾಸಿಯಾಗಿರಬೇಕು. 11 ರಿಂದ 13 ವರ್ಷದ ವಯೋಮಾನದವರಾಗಿರಬೇಕು.
ಅಭ್ಯರ್ಥಿಗಳು ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣ ಪತ್ರ, ವಿಶೇಷ ವರ್ಗಗಳಿಗೆ ಬೇಕಾಗಿರುವ ಪ್ರಮಾಣ ಪತ್ರ(ಬಾಲ ಕಾರ್ಮಿಕ ಮಕ್ಕಳು/ಅನಾಥ ಮಕ್ಕಳು/ವಿಧವೆಯರ ಮಕ್ಕಳು/ಮಾಜಿ ಸೈನಿಕರ ಮಕ್ಕಳು/ಸಫಾಯಿ ಕರ್ಮಚಾರಿ ಮಕ್ಕಳು/ಆತ್ಮಹತ್ಯೆ ರೈತರ ಮಕ್ಕಳು/ಸ್ಥಳೀಯ ಅಭ್ಯರ್ಥಿ ಮಕ್ಕಳು/ವಿಶೇಷ ದುರ್ಬಲ ವರ್ಗ)ವನ್ನು ಸಲ್ಲಿಸಬೇಕು.
ಪ್ರವೇಶ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಅಲ್ಪಸಂಖ್ಯಾತರ ನಿರ್ದೇಶನಾಯದ ವತಿಯಿಂದ ನಡೆಸುವ ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ವಸತಿ ಶಾಲೆಯ ಆಯ್ಕೆಗೆ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳೇ ನೇರ ಮಾನದಂಡವಾಗಿರುತ್ತದೆ. ಪ್ರವೇಶ ಪರೀಕ್ಷೆಯು 100 ಅಂಕಗಳ ಬಹು ಆಯ್ಕೆ ಮಾದರಿಯಲ್ಲಿರುತ್ತದೆ.
ಮಾಹಿತಿ ಕೇಂದ್ರಗಳ ಸಂಪರ್ಕ ಸಂಖ್ಯೆ: ಮೇಲಿನ ಹನಸವಾಡಿ, ಶಿವಮೊಗ್ಗ 9483623537, ದೊಡ್ಡೇರಿ ಭದ್ರಾವತಿ 9591237905, ಶಿರಾಳಕೊಪ್ಪ 8310350361, ಉಡುಗಣಿ ಶಿಕಾರಿಪುರ 9036866642, ಶಿವಮೊಗ್ಗ 7676888388, ಭದ್ರಾವತಿ 9538853680, ತೀರ್ಥಹಳ್ಳಿ 8861982835, ಸೊರಬ 9513815513, ಶಿಕಾರಿಪುರ 7829136724, ಹೊಸನಗರ 9008447029, ಸಾಗರ 7338222907 ಆಗಿರುತ್ತದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
BREAKING: ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಬರ್ಬರ ಹತ್ಯೆ: ಕೆರೆಗೆ ಶವ ಎಸೆದು ಪೊಲೀಸರಿಗೆ ಶರಣಾದ ಪತಿ