ವಿಜಯನಗರ: ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಜಾತ್ರೆಗಳಲ್ಲಿ ಒಂದು ಕೊಟ್ಟೂರು ಬಸವೇಶ್ವರ ಜಾತ್ರೆ. ಸೋಮವಾರ ಜಾತ್ರೆಯ ವೇಳೆ ಕೊಟ್ಟೂರು ಗುರು ಬಸವೇಶ್ವರ ತೇರನ್ನು ಎಳೆಯುವಂತ ಸಂದರ್ಭದಲ್ಲಿ ಅವಘಟ ಸಂಭವಿಸಿದೆ. ಆದರೇ ಭಕ್ತರು ಮಾತ್ರ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆಯ ಸಂಜೆಯಂದು ಕೊಟ್ಟೂರು ಗುರುಬಸವೇಶ್ವರ ತೇರನ್ನು ಎಳೆಯುತ್ತಿದ್ದಾಗ ಸ್ಟೇರಿಂಗ್ ಕೈಕೊಟ್ಟಿದೆ. ಈ ಸಂದರ್ಭದಲ್ಲಿ ಬೃಹತ್ ಗಾತ್ರದ ತೇರು ಕೆಳಗೆ ಬಿದ್ದಿದೆ. ತೇರು ಕೆಳಗೆ ಬೀಳುತ್ತಿದ್ದನ್ನು ಗಮನಿಸಿದಂತ ಭಕ್ತರು ಪಕಕ್ಕೆ ಸರಿದಿದ್ದಾರೆ. ಹೀಗಾಗಿ ಭಾರೀ ಅವಘಡ, ಪ್ರಾಣಾಪಾಯದಿಂದ ಭಕ್ತರು ಪಾರಾಗಿದ್ದಾರೆ.
ರಥದ ಗಾಲಿಗಳನ್ನು ನಿರ್ವಹಣೆ ಮಾಡುತ್ತಿದ್ದವರ ಸಮಯ ಪ್ರಜ್ಞೆಯಿಂದ ಭಕ್ತರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ರಥ ಮುರಿದು ಬಿದ್ದ ರಭಸಕ್ಕೆ ಪಕ್ಕದಲ್ಲಿನ ಬೈಕ್, ಸ್ಕೂಟಿ ಅಪ್ಪಚ್ಚಿಯಾಗಿದೆ.
ಹಿಂದುಳಿದ ವರ್ಗಗಳ ಸಂಪಾದಕ ಮತ್ತು ವರದಿಗಾರರ ಸಂಘದ ವಾರ್ಷಿಕ ವಿ.ಪಿ ಸಿಂಗ್ ಪ್ರಶಸ್ತಿ ಪ್ರಕಟ