ಬೆಂಗಳೂರು : ಅತಿಥಿ ಉಪನ್ಯಾಸಕರ ಗೌರವಧನ ಪಾವತಿಸಲು ಬಿಡುಗಡೆ ಮಾಡಿರುವ ಅನುದಾನ ಬಳಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಪ್ರಸ್ತಾಪಿತ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖಾ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ನವೆಂಬರ್-2024, ಡಿಸೆಂಬರ್-2024 ಮತ್ತು ಜನವರಿ -2025ರ ಮಾಹೆಯ ಗೌರವಧನ ಪಾವತಿಗಾಗಿ ಉಲ್ಲೇಖ (01) ಮತ್ತು (02) ರ ಆದೇಶದನ್ವಯ ಅನುದಾನ ಬಿಡುಗಡೆ ಮಾಡಲಾಗಿದೆ.
ಉಲ್ಲೇಖ (03)ರ ಆದೇಶದಂತೆ 2024-25ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯಿಂದ 31.01.2025ಕ್ಕಿಂತ ಮೊದಲು ಹೊರಡಿಸಲಾಗಿರುವ ಪುನರ್ ವಿನಿಯೋಗದ ಬಿಲ್ಲುಗಳನ್ನು ದಿನಾಂಕ 15.02.2025ರ ಒಳಗಾಗಿ ಖಜಾನೆ /ಉಪಖಜಾನೆಗಳಿಗೆ ಸಲ್ಲಿಸಬೇಕಾಗಿರುತ್ತದೆ.
ಇಲಾಖಾ ವ್ಯಾಪ್ತಿಯ ಎಲ್ಲಾ ಡಿಡಿಒಗಳು ಈ ಸುತ್ತೋಲೆಗೆ ಲಗತ್ತಿಸಿರುವ ಪುನರ್ವಿನಿಯೋಗದ ಆದೇಶಗಳನ್ನು ಅತಿಥಿ ಉಪನ್ಯಾಸಕರ ಗೌರವಧನ ಬಿಲ್ ಗೆ ಲಗತ್ತಿಸಿ ಸಂಬಂಧಪಟ್ಟ ಖಜಾನೆ /ಉಪಖಜಾನೆಗೆ ನಿಗದಿತ ಕೊನೆಯ ದಿನಾಂಕದ ಒಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.