ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಅಟೆಂಡರ್, ಸಹಾಯಕ ಸಿಬ್ಬಂದಿಯಂ ತಹ ಲೆವೆಲ್ 1 ನೌಕರರ ಮೂಲ ವೇತನ 18 ಸಾವಿರ ರೂ.ನಿಂದ 51480 ರೂ.ವರೆಗೆ ಅಂದರೆ 33480 ರು.ನಷ್ಟು ಪರಿಷ್ಕರಣೆಯಾಗಬಹುದು ಎಂದು ವರದಿಗಳು ತಿಳಿಸಿವೆ.
ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಶಿಫಾರಸು ಮಾಡಲು ಸರ್ಕಾರ ರಚಿಸಿರುವ 8ನೇ ವೇತನ ಆಯೋಗವು ಅಟೆಂಡರ್, ಸಹಾಯಕ ಸಿಬ್ಬಂದಿಯಂ ತಹ ಲೆವೆಲ್ 1 ನೌಕರರ ಮೂಲ ವೇತನ 18 ಸಾವಿರ ರು.ನಿಂದ 51480 ರೂ.ವರೆಗೆ ಅಂದರೆ 33480 ರು.ನಷ್ಟು ಪರಿಷ್ಕರಣೆ ಮಾಡಬಹುದು ಎನ್ನಲಾಗಿದೆ.
ವೇತನ ಆಯೋಗವು ಹೊಸ ವೇತನ ಶಿಫಾರಸು ಮಾಡಲು ‘ಫಿಟ್‌ಮೆಂಟ್ ಫ್ಯಾಕ್ಟರ್’ ಅನ್ನು ಆಧಾರವಾಗಿ ಬಳಸುತ್ತದೆ. ಈ ಹಿಂದೆ 7ನೇ ವೇತನ ಆಯೋಗವು 2.57 ಫಿಟ್ ಮೆಂಟ್ ಫ್ಯಾಕ್ಟರ್ ಆಧರಿಸಿ ವೇತನ ಏರಿಕೆಯ ಶಿಫಾರಸು ಮಾಡಿತ್ತು. ವೇತನ ಆಯೋಗದ ಶಿಫಾರಸುಗಳ ಪ್ರಕಾರ ವೇತನಗಳನ್ನು ಎಷ್ಟು ಹೊಂದಿಸಬೇಕು ಎಂಬುದನ್ನು ನಿರ್ಧರಿಸುವ ಗುಣಾಂಕವಾಗಿ ಕಾರ್ಯನಿರ್ವಹಿಸುವ ನಿರ್ಣಾಯಕ ಸೂಚಕವಾಗಿದೆ. 7ನೇ ವೇತನ ಆಯೋಗದ ಅಡಿಯಲ್ಲಿ 2.57 ರ ಫಿಟ್‌ಮೆಂಟ್ ಫ್ಯಾಕ್ಟರ್‌ನೊಂದಿಗೆ, ಲೆವೆಲ್ 1 ರಲ್ಲಿನ ವೇತನವನ್ನು 2016 ರಲ್ಲಿ 7,000 ರೂ.ಗಳಿಂದ (6ನೇ ವೇತನ ಆಯೋಗದ ಅಡಿಯಲ್ಲಿ) 18,000 ರೂ.ಗಳಿಗೆ ಹೆಚ್ಚಿಸಲಾಗಿತ್ತು.
ಲೆವೆಲ್ 1ರಲ್ಲಿ ಕಾರ್ಕೂನ್‌ಗಳು, ಅಟೆಂಡರ್‌ಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ, 18,000 ರೂ.ಗಳ ಮೂಲ ವೇತನವನ್ನು 51,480 ರೂ.ಗಳಿಗೆ ಪರಿಷ್ಕರಿಸುವ ನಿರೀಕ್ಷೆಯಿದೆ. ಇದು 33,480 ರೂ.ಗಳ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.