ಚಾಮರಾಜನಗರ : ಕಿವಿ ಚುಚ್ಚಿಸುವಾಗ ವೈದ್ಯರ ಎಡವಟ್ಟಿನಿಂದಾಗಿ 5 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಹಂಗಳ ಗ್ರಾಮದ ಆನಂದ್, ಶುಭಾ ಮಾನಸಾ ಅವರ 5 ತಿಂಗಳ ಮಗುವಿಗೆ ಕಿವಿ ಚುಚ್ಚಿಸಲು ಬೊಮ್ಮಲಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯ ನಾಗರಾಜು ಮಗುವಿಗೆ ಕಿವಿ ಚುಚ್ಚುವ ಮುಂಚೆ 2 ಕಿವಿ ಗೂ ಅನಸ್ತೇಷಿಯಾ ನೀಡಿದ್ದಾರೆ. ಬಳಿಕ ಮಗು ನಡುಗಲು ಶುರು ಮಾಡಿದೆ. ತಕ್ಷಣ ಡಾ। ನಾಗರಾಜು ಗುಂಡ್ಲುಪೇಟೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿದೆ ಎಂದು ಪೋಷಕರು ಹೇಳಿದ್ದಾರೆ.