ಬೆಂಗಳೂರು : 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರನ್ವಯ 2024-25ನೇ ಸಾಲಿಗೆ ಶಾಲಾನುದಾನ ಕಾರ್ಯಕ್ರಮದಡಿ 42136 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ರೂ. 11459.00 ಲಕ್ಷಗಳು ಅನುಮೋದನೆಯಾಗಿರುತ್ತದೆ.
ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (2 ಹಂತದ) ಶಾಲೆಗಳನ್ನು ಹೊರತುಪಡಿಸಿ 41933 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೇಕಡಾ 20 ರಷು ಶಾಲಾನುದಾನವನ್ನು ರೂ. 22,67,50,000/- ಗಳನ್ನು ಈಗಾಗಲೇ ಉಲ್ಲೇಖ(2) ಮೊದಲ ಕಂತಿನ ಶಾಲಾನುದೇ ಬಿಡುಗಡೆ ಮಾಡಲಾಗಿದೆ.
ಮುಂದುವರೆದು ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (4 ಹಂತದ) ಶಾಲೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ ZERO ENROLMENT ಹೊಂದಿರುವ ಶಾಲೆಗಳನ್ನು ಹೊರತುಪಡಿಸಿ 41392 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಎರಡನೇ ಕಂತಿನ ಶೇಕಡಾ 20 ರಷ್ಟು ಶಾಲಾನುದಾನವನ್ನು ರೂ. 22,47,75,000/- ಗಳನ್ನು (ಇಪ್ಪತ್ತೆರಡು ಕೋಟಿ ನಲವತ್ತೇಳು ಲಕ್ಷದ ಎಪ್ಪತೈದು ಸಾವಿರ ಮಾತ್ರ) 35 ಜಿಲ್ಲೆಗಳಿಗೆ PRABANDH COMPONENT CODE: 5.4.1 PFMS-CSS COMPONENT CODE F.01.18 ರಡಿ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಅನುಬಂಧ-1 ರಂತೆ ಜಿಲ್ಲಾವಾರು ನಿಗದಿಪಡಿಸಿದೆ.
ಸದರಿ ಮೊತ್ತವನ್ನು ಜಿಲ್ಲಾ ಹಂತದಿಂದ ಆಯಾ ಬ್ಲಾಕ್‌ಗಳಿಗೆ (ಅನುಬಂಧ-2 ರಂತೆ) ಹಾಗೂ ಬ್ಲಾಕ್‌ಗಳಿಂದ ಆಯಾ ಶಾಲೆಗಳಿಗೆ ಮಿತಿ ನಿಗದಿಪಡಿಸಿ ಬಿಡುಗಡೆಗೊಳಿಸಲು ಸೂಚಿಸಿದೆ.