ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದಂತ 30 ಐಶಾರಾಮಿ ಕಾರುಗಳನ್ನು ಆರ್ ಟಿ ಓ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ಜಪ್ತಿ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಆರ್ ಟಿ ಓ ಅಧಿಕಾರಿಗಳಉ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕದಲ್ಲಿ ಟ್ಯಾಕ್ಸ್ ಕಟ್ಟದೇ ಸಂಚರಿಸುತ್ತಿದ್ದಂತ 30 ಕಾರುಗಳನ್ನು ಸೀಜ್ ಮಾಡಿದ್ದಾರೆ.
ದೆಹಲಿ, ಪುದುಚೇರಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೋಂದಣಿಯನ್ನು ಐಶಾರಾಮಿ ಕಾರುಗಳು ಮಾಡಿದ್ದವು. ಹಲವು ರಾಜ್ಯಗಳಲ್ಲಿ ನೋಂದಣಿ ಮಾಡಿದ್ದಂತ ಕಾರುಗಳನ್ನು ಕರ್ನಾಟಕದಲ್ಲಿ ಓಡಿಸಲಾಗುತ್ತಿತ್ತು.
ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಅನಧಿಕೃತವಾಗಿ ಸಂಚರಿಸುತ್ತಿದ್ದಂತ ಐಷಾರಾಮಿ 30 ಕಾರುಗಳನ್ನು ಆರ್ ಟಿ ಓ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜಪ್ತಿಯಾದಂತ ಕಾರುಗಳಿಂದ 3 ಕೋಟಿ ತೆರಿಗೆಯನ್ನು ವಸೂಲಿ ಮಾಡುವ ಸಾಧ್ಯತೆ ಇದೆ.
ರೈತರಿಗೆ ಗುಡ್ ನ್ಯೂಸ್: ಶೇ.90ರಷ್ಟು ಸಹಾಯಧನದೊಂದಿಗೆ ಸ್ಪ್ರಿಂಕ್ಲರ್ ಅಳವಡಿಕೆಗೆ ಅರ್ಜಿ ಆಹ್ವಾನ