ಕಾರವಾರ: ಇನ್ಮುಂದೆ ಗೋಹತ್ಯೆ ಏನಾದರೂ ನಡೆದರೇ ಸರ್ಕಲ್ ನಲ್ಲಿ ಗುಂಡು ಹಾಕ್ತೀವಿ ಎಂಬುದಾಗಿ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅವರು ಗುಡುಗಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲಕೋಡು ಅರಣ್ಯದಲ್ಲಿ ಗರ್ಭ ಧರಿಸಿದ ಗೋವನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಮಾತನಾಡಿದಂತ ಅವರು, ಗೋಹತ್ಯೆ ಹಿಂದಿನಿಂದಲೂ ನಡೆಯುತ್ತಿದೆ. ಬಿಜೆಪಿ ಅವಧಿಯಲ್ಲೂ ನಡೆದಿದೆ ಎಂದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು. ದಿನಕರ ಶೆಟ್ಟಿ ಏನು ಈಗ ದಿನಕರ ಖಾನ್ ಆಗಿದ್ದಾರಾ ಎಂಬುದಾಗಿ ಪ್ರಶ್ನಿಸಿದರು.
ದಿನಕರ ಶೆಟ್ಟಿ ಅವರೇ ನೀವು ನಮ್ಮ ಸಿಎಂ, ಸಚಿವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬೇಡಿ. ನಾವು ಗೋವುಗಳ ಹಂತಕರನ್ನು ಯಾವುದೇ ಕಾರಣಕ್ಕೂ ರಕ್ಷಇಸೋದಲಿಲ್. ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡುವಂತೆ ಹೇಳಿದ್ದೇವೆ. ಇನ್ಮುಂದೆ ಯಾವುದೇ ಕಾರಣಕ್ಕೂ ಗೋವು ಕಳ್ಳತನ, ಹತ್ಯೆ ಆಗಬಾರದು. ಗೋಹತ್ಯೆ ಏನಾದರೂ ನಡೆದರೇ ಸರ್ಕಲ್ ನಲ್ಲಿ ನಿಲ್ಲಿ ಗುಂಡು ಹಾಕ್ತೀವಿ ಎಂಬುದಾಗಿ ಎಚ್ಚರಿಸಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಡೆಯಲು ಸುಗ್ರೀವಾಜ್ಞೆ: ಡಿಸಿಎಂ ಡಿ.ಕೆ.ಶಿವಕುಮಾರ್