ನವದೆಹಲಿ : ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಜಾತಿ ಜನಗಣತಿಯ ವಿಷಯವನ್ನ ಎತ್ತಿದರು. ಒಂದೇ ಒಂದು ಕಾರ್ಪೊರೇಟ್ ದಲಿತ ಅಥವಾ ಒಬಿಸಿ ಒಡೆತನದಲ್ಲಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರೇ ಒಬಿಸಿ ವರ್ಗಕ್ಕೆ ಸೇರಿದವರು ಎಂದು ಹೇಳುವ ಮೂಲಕ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಸಂಸತ್ತಿನಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾವು ತೆಲಂಗಾಣದಲ್ಲಿ ಜಾತಿ ಗಣತಿ ನಡೆಸಿದ್ದೇವೆ ಮತ್ತು ನಾವು ಕಂಡುಕೊಂಡಿರುವುದು ಆಘಾತಕಾರಿಯಾಗಿದೆ. ತೆಲಂಗಾಣದ ಸುಮಾರು 90% ದಲಿತ, ಆದಿವಾಸಿ ಅಥವಾ ಒಬಿಸಿ. ಇದು ದೇಶಾದ್ಯಂತದ ಕಥೆ ಎಂದು ನನಗೆ ಮನವರಿಕೆಯಾಗಿದೆ. ಒಬಿಸಿ ಜನಸಂಖ್ಯೆ 50% ಕ್ಕಿಂತ ಕಡಿಮೆಯಿಲ್ಲ, 16% ದಲಿತರು, 9% ಆದಿವಾಸಿಗಳು ಮತ್ತು 15% ಅಲ್ಪಸಂಖ್ಯಾತರು ಎಂದು ನನಗೆ ಮನವರಿಕೆಯಾಗಿದೆ ಎಂದರು.
UPA ಅಥ್ವಾ ‘NDA’ಯಿಂದ ಉದ್ಯೋಗ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ : ಲೋಕಸಭೆಯಲ್ಲಿ ‘ರಾಹುಲ್ ಗಾಂಧಿ’ ವಾಗ್ದಾಳಿ
BREAKING : ಅಂಡರ್-19 ವಿಶ್ವಕಪ್ ಗೆದ್ದ ಮಹಿಳಾ ತಂಡಕ್ಕೆ 5,73,000 ಡಾಲರ್ ಬಹುಮಾನ ಘೋಷಿಸಿದ ‘BCCI’
BREAKING : ತುಮಕೂರಲ್ಲಿ ಘೋರ ದುರಂತ : ರೈಲು ನಿಲ್ಲೊಕು ಮುನ್ನ ಇಳಿಯಲು ಹೋಗಿ, ಯುವಕ ದುರಂತ ಸಾವು!