ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಮಹಾಕುಂಭಮೇಳದಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಸತೀಶ್ ಜಾರಕಿಹೊಳಿ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.
ಬೆಳಗಾವಿಯಿಂದ ಪ್ರಯಾಗ್ ರಾಜ್ ಗೆ ತೆರಳಿರುವ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬಳಿಕ ಸತೀಶ್ ಜಾರಕಿಹೊಳಿ ಫೋಟೋ ಹಿಡಿದು ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಹರಕೆ ಹೊತ್ತಿದ್ದಾರೆ.