ಉಡುಪಿ: ಉಡುಪಿ ಜಿಲ್ಲೆಯ ತೊಂಬಟ್ಟುವಿನ ನಕ್ಸಲ್ ಲಕ್ಷ್ಮಿ ಅವರು ಉಡುಪಿ ಜಿಲ್ಲಾಡಳಿತದ ಮುಂದೆ ಇಂದು ಶರಣಾಗತಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಮವಾಸ್ಯೆ ಬೈಲಿನ ತೊಂಬಟ್ಟು ಗ್ರಾಮದ ಲಕ್ಷ್ಮೀ ಅವರು ಆಂಧ್ರದಲ್ಲಿ ನಕ್ಸಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2006ರ ಮಾರ್ಚ್.6ರಿಂದ ಲಕ್ಷ್ಮೀ ತೊಂಬಟ್ಟು ನಾಪತ್ತೆಯಾಗಿದ್ದರು. ಕರ್ನಾಟಕದಿಂದ ನಾಪತ್ತೆಯಾಗಿದ್ದಂತ ಲಕ್ಷ್ಮೀ ತೊಂಬಟ್ಟು ಆಂಧ್ರಪ್ರದೇಶದಲ್ಲಿ ನಕ್ಸಲರಾಗಿ ಸಕ್ರೀಯರಾಗಿದ್ದರು. ಅವರು ಮಾಜಿ ನಕ್ಸಲ್ ಸಂಜೀವ್ ಅವರನ್ನು ಮದುವೆಯಾಗಿದ್ದರು. ಆ ಬಳಿಕ ನಕ್ಸಲ್ ತೊರೆದು, ಆಂಧ್ರದಲ್ಲಿ ಸಂಸಾರಿಕ ಜೀವನ ನಡೆಸುತ್ತಿದ್ದರು.
ಇದೀಗ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪ್ರಕ್ರಿಯೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗಿದ್ದಾರೆ. ಎಸ್ ಪಿ ಡಾ.ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ತೊಂಬಟ್ಟು ಲಕ್ಷ್ಮೀ ಶರಣಾಗತಿ ಪ್ರಕ್ರಿಯೆ ನಡೆಯಿತು.
ಸದ್ಯ ಸಂಜೀವ್ ಆಲಿಯಾಸ್ ಸಲೀಂ ಹಾಗೂ ಲಕ್ಷ್ಮೀ ನಕ್ಸಲ್ ತೊರೆದು, ಮುಖ್ಯವಾಹಿನಿಗೆ ಬಂದಿದ್ದರು. ಇವರನ್ನು ವಿವಾಹವಾಗಿ ಆಂಧ್ರದಲ್ಲಿ ಜೀವನ ನಡೆಸುತ್ತಿರುವಂತ ಲಕ್ಷ್ಮೀ ಕೂಡ ನಕ್ಸಲ್ ತೊರೆದು, ಆಂಧ್ರ ಸರ್ಕಾರದ ಮುಂದೆ ಶರಣಾಗಿದ್ದರು. ಇದೀಗ ಕರ್ನಾಟಕದ ಉಡುಪಿ ಜಿಲ್ಲೆಯ ಅಮವಾಸ್ಯೆ ಬೈಲಿನ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಇಂದು ಉಡುಪಿ ಡಿಸಿ ಮುಂದೆ ಶರಣಾಗತಿಯಾಗಿದ್ದಾರೆ.