ಬೆಂಗಳೂರು :2025-26ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಗೆ ಗ್ರಾಮ/ವಾರ್ಡ್ ಗಳಲ್ಲಿನ ಎಲ್ಲಾ ಶಾಲೆಗಳನ್ನು ಮ್ಯಾಪಿಂಗ್ ಮಾಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
2025-26ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಗೆ ಉಲ್ಲೇಖಿತ ಆದೇಶದಲ್ಲಿ ನೆರೆಹೊರೆಯ ಪ್ರದೇಶದ ಮಿತಿಯನ್ನು ಈ ಕೆಳಗಿನಂತೆ ಗುರುತಿಸಲಾಗಿದೆ.
1. ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಿಸಿದ ಕಂದಾಯ ಗ್ರಾಮದ ಭೌಗೋಳಿಕ ಗಡಿ
2. ನಗರಸಭೆ, ಟೌನ್ ಮುನಿಸಿಪಲ್ ಕೌನ್ಸಿಲ್ ಮತ್ತು ಪಟ್ಟಣ ಪಂಚಾಯಿತಿಯ ಭೌಗೋಳಿಕ ಗಡಿ
3. ಮಹಾನಗರ ಪಾಲಿಕೆಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ಭೌಗೋಳಿಕ ಗಡಿ
ಆರ್.ಟಿ.ಇ ಕಾಯಿದೆಯಡಿಯಲ್ಲಿನ ಅವಕಾಶಗಳಂತೆ 25% ಸೀಟುಗಳನ್ನು ಹಂಚಿಕೆ ಮಾಡಲು ಅರ್ಹ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಗುರುತಿಸಲು ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಅನುದಾನರಹಿತ ಶಾಲೆಗಳನ್ನು ಮೇಲ್ಕಂಡಂತೆ ಆ ಶಾಲೆಗಳು ಇರುವಂತಹ ಭೌಗೋಳಿಕ ಪ್ರದೇಶಕ್ಕೆ ಮ್ಯಾಪಿಂಗ್ ಮಾಡುವ ಅಗತ್ಯವಿರುತ್ತದೆ. ಈ ಸಂಬಂಧ ಹಿಂದಿನ ಸಾಲಿನಲ್ಲಿ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಆರ್.ಟಿ.ಇ ದಾಖಲಾತಿ ತಂತ್ರಾಂಶದಲ್ಲಿ ಮೇಲ್ಕಂಡಂತೆ ದಾಖಲಿಸಿದ ಕಂದಾಯ ಗ್ರಾಮಗಳು, ನಗರಸಭೆ, ಟೌನ್ ಮುನಿಸಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ 2024-25ನೇ ಸಾಲಿನ ಡಿಸೆಂಬರ್-31ರಲ್ಲಿರುವಂತೆ ಸ್ಯಾಟ್ಸ್ ತಂತ್ರಾಂಶದಲ್ಲಿ ಪ್ರವೇಶ ತರಗತಿಗೆ (1ನೇ ತರಗತಿ ಅಥವಾ ಎಲ್.ಕೆ.ಜಿ) ದಾಖಲಾಗಿರುವ ಶಾಲಾವಾರು ವಿದ್ಯಾರ್ಥಿಗಳ ಸಂಖ್ಯೆಯನ್ನು ಒದಗಿಸಲಾಗಿದೆ. ಕ್ಷೇತ್ರಶಿಕ್ಷಣಾಧಿಕಾರಿಗಳು ತಂತ್ರಾಂಶದಲ್ಲಿ ಒದಗಿಸಿರುವ ಮಾಹಿತಿಯನ್ನು ಪರಿಶೀಲಿಸಿ ಮ್ಯಾಪಿಂಗ್ ಪ್ರಕ್ರಿಯೆಗೆ ಅಗತ್ಯ ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದೆ. 2:01.02.2025 80 05.02.20250
1. 3, www.schooleducation.karnataka.gov.in 3 RTE School Mapping Moduleರಲ್ಲಿ ಎಂಬ ವಿವರದಡಿಯಲ್ಲಿ ಪಡೆಯಬಹುದಾಗಿದೆ. ಅಥವಾ e-Gov. Software Engineering Services RTE Admission Software ಆಯ್ಕೆ ಮಾಡಿಕೊಂಡು ಇದರಲ್ಲಿ Administrators ಆಯ್ಕೆ ಮಾಡಿಕೊಂಡು ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ Username ಮತ್ತು Password ದಾಖಲಿಸಿ ಲಾಗಿನ್ ಆಗಬಹುದಾಗಿದೆ.(User Manual ಕಳುಹಿಸಲಾಗುವುದು)
2. ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ Username ಮತ್ತು Password ಗಳನ್ನು ಇಲಾಖೆಯು ನೀಡಿರುವ ಮೊಬೈಲ್ ಸಂಖ್ಯೆಗೆ ದಿನಾಂಕ:01.02.2025ರಂದು ಮತ್ತೊಮ್ಮೆ ಕಳುಹಿಸಲಾಗುವುದು. ಇದನ್ನು ಬಳಸಿ ಮೇಲ್ಕಂಡಂತೆ ಲಾಗಿನ್ ಆಗಬಹುದಾಗಿದೆ. ತಮ್ಮ Username ಮತ್ತು Password ಗಳ ಮರ್ಬಳಕೆ ಆಗದಂತೆ ಸುರಕ್ಷಿತವಾಗಿಟ್ಟುಕೊಳ್ಳುವುದು ತಮ್ಮ ಜವಾಬ್ದಾರಿಯಾಗಿರುತ್ತದೆ.
3. Administratorsನಲ್ಲಿ ಕೆಳಕಂಡಂತೆ ಮೂರು ಮಾಡ್ಯೂಲ್‌ಗಳಿದ್ದು ಇವುಗಳನ್ನು ಪರಿಶೀಲಿಸಿ ತಮ್ಮ ತಾಲ್ಲೂಕಿನ ಗ್ರಾಮಯು.ಎಲ್.ಬಿ/ವಾರ್ಡ್‌ಗಳ ವಿವರಗಳನ್ನು ಅಪ್‌ಡೇಟ್ ಮಾಡಿ ಶಾಲೆಗಳನ್ನು ಮ್ಯಾಪಿಂಗ್ ಮಾಡುವುದು.
a. Correction of Villages/Wards/ULB and pincodes.
b. Creation of habitations/area or locality under villages/wards/ULB.
c. School mapping and uploading of documents for minority schools.
4. ಶಾಲೆಗಳ ಪ್ರವೇಶ ತರಗತಿಯನ್ನು ಸ್ಮಾಟ್ಸ್ ತಂತ್ರಾಂಶದಲ್ಲಿ ದಿನಾಂಕ: 31.12..2024ರಲ್ಲಿರುವಂತೆ ಆರ್.ಟಿ.ಇ ತಂತ್ರಾಂಶದಲ್ಲಿ ಒದಗಿಸಲಾಗಿದೆ. LKG ಮತ್ತು 1ನೇ ತರಗತಿಯ ದಾಖಲಾತಿಯನ್ನು ಬದಲಾವಣೆ ಮಾಡಲು ತಂತ್ರಾಂಶದಲ್ಲಿ ಅವಕಾಶ ಇರುವುದಿಲ್ಲ. ಪ್ರತಿಯೊಂದು ಶಾಲೆಯ ಪ್ರವೇಶ ತರಗತಿಯನ್ನು ಸರಿಯಾಗಿ ಪರಿಶೀಲಿಸಿ ನಮೂದಿಸುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
5. ನಿಯಮಾನುಸಾರ ಅನುಮತಿ ಪಡೆದ ಅಧಿಕೃತ ಶಾಲೆಗಳು ಮತ್ತು ಅಧಿಕೃತ ತರಗತಿ/ವಿಭಾಗಗಳನ್ನು ಮಾತ್ರ ಪರಿಗಣಿಸಿ ತಂತ್ರಾಂಶದಲ್ಲಿ ದಾಖಲಿಸುವುದು.
6. ವಾರ್ಡ್/ಗ್ರಾಮಗಳಲ್ಲಿ ಹೊಸದಾಗಿ ಪ್ರಾರಂಭವಾದ ಸರ್ಕಾರಿ, ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳನ್ನು ಒಳಗೊಂಡಂತೆ ಎಲ್ಲಾ ಶಾಲೆಗಳನ್ನು ಮ್ಯಾಪಿಂಗ್ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸುವುದು.
7. ಯಾವುದೇ ಕಾರಣಕ್ಕೂ ಗ್ರಾಮ/ಯು.ಎಲ್.ಬಿ/ವಾರ್ಡ್ ಗಳನ್ನು ಸೇರಿಸುವಲ್ಲಿ aoarte ತೆಗೆದುಹಾಕುವಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಶಾಲೆಗಳನ್ನು ತಪ್ಪಾಗಿ ಮ್ಯಾಪಿಂಗ್ ಮಾಡಿದಲ್ಲಿ ಶಾಲೆಗಳ ಪ್ರವೇಶ ತರಗತಿಗಳಾದ LKG ಮತ್ತು 1ನೇ ತರಗತಿಯನ್ನು ನಮೂದಿಸುವಲ್ಲಿ ಆಗುವಂತಹ ತಪ್ಪುಗಳಿಗೆ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ತಮ್ಮ ವ್ಯಾಪ್ತಿಯಲ್ಲಿನ ತಾಲ್ಲೂಕುಗಳಲ್ಲಿ ನಡೆಯುವ ಆರ್.ಟಿ.ಇ ದಾಖಲಾತಿ ಪ್ರಕ್ರಿಯೆಯ ಮ್ಯಾಪಿಂಗ್ ಕಾರ್ಯವನ್ನು ನಿರಂತರವಾಗಿ ಪರಿಶೀಲನೆ ಮಾಡಿ ನಿಗದಿತ ಅವಧಿಯಲ್ಲಿ ಮ್ಯಾಪಿಂಗ್ ಪ್ರಕ್ರಿಯೆಯು ನಿಖರವಾಗಿ ಪೂರ್ಣಗೊಳಿಸಿರುವುದನ್ನು ಖಾತ್ರಿಪಡಿಸಿಕೊಳ್ಳಲು ಸೂಚಿಸಿದೆ.